logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಅನಿವಾರ್ಯವಾಗಿ ಹಾಲಿನ ದರ ಏರಿಕೆ ಮಾಡಬೇಕಾಯಿತು: ಸಿಎಂ ಡಿ.ಕೆ.ಶಿವಕುಮಾರ್

ಟ್ರೆಂಡಿಂಗ್
share whatsappshare facebookshare telegram
31 Oct 2026
post image

ಬೆಂಗಳೂರು: ರೈತರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಹಾಲಿನ ದರ ಏರಿಕೆ ಮಾಡಬೇಕಾಯಿತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಹಾಲಿನ ಬೆಲೆ ಹೆಚ್ಚಳಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 12 ರೂ. ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದವು. ಆದರೆ ಅಂತಿಮವಾಗಿ ದರ ಏರಿಕೆ ಅನಿವಾರ್ಯವಾಯಿತು ಎಂದು ಹೇಳಿದರು.

ಪಕ್ಕದ ರಾಜ್ಯಗಳಲ್ಲಿಯೂ ಹಾಲಿನ ದರ ಹೆಚ್ಚಿರುವುದರಿಂದ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದ ಹಾಲು ಹೊರರಾಜ್ಯಗಳಿಗೆ ಪೂರೈಕೆಯಾಗುತ್ತಿತ್ತು. ಮತ್ತೊಂದೆಡೆ ಬರಗಾಲದ ಪರಿಣಾಮ ಹಾಲಿನ ಉತ್ಪಾದನೆಯೂ ಕುಸಿದಿದೆ. ಈ ಎಲ್ಲ ಕಾರಣಗಳಿಂದ ಹಾಲಿನ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಗೋವುಗಳ ರಕ್ಷಣೆ ಮಾಡಬೇಕಾದರೆ ಅವುಗಳಿಗೆ ಸಮರ್ಪಕವಾಗಿ ಮೇವು ಮತ್ತು ಆಹಾರ ಒದಗಿಸಬೇಕು. ಇದಕ್ಕೆ ರೈತರು ಆರ್ಥಿಕವಾಗಿ ಸದೃಢವಾಗಿರಬೇಕು. ರೈತರ ಬಳಿ ಹಣವಿಲ್ಲದಿದ್ದರೆ ಜಾನುವಾರುಗಳಿಗೆ ಮೇವು ಒದಗಿಸುವುದೂ ಕಷ್ಟವಾಗುತ್ತದೆ. ಹೀಗಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ಗೋವುಗಳ ರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು.

ಬರಗಾಲದ ಸಂದರ್ಭದಲ್ಲಿ ಗೋವುಗಳನ್ನು ಉಳಿಸುವ ಉದ್ದೇಶದಿಂದಲೂ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಹಲವು ವರ್ಷಗಳಿಂದ ಹಾಲಿನ ದರ ಪರಿಷ್ಕರಣೆ ಮಾಡದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊಸರಿನ ದರ ಹೆಚ್ಚಳದ ವಿಚಾರವನ್ನು ಹಾಲು ಒಕ್ಕೂಟಗಳೇ ನಿರ್ಧರಿಸಲಿವೆ. ಆದರೆ ಹಾಲಿನ ದರವನ್ನು ರೈತರ ಹಿತದೃಷ್ಟಿಯಿಂದ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.