logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ ಪರಿಸರ ಯೋಗ್ಯ ಶೌಚಾಲಯ ಅಳವಡಿಕೆ

ಟ್ರೆಂಡಿಂಗ್
share whatsappshare facebookshare telegram
27 Jan 2023
post image

ಕಾರ್ಕಳ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಚ ಭಾರತ ಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ಪರಿಕಲ್ಪನೆಯಂತೆ ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯವನ್ನು ಅಳವಡಿಸಲಾಗಿದೆ. ಭಾರತದ ರಕ್ಷಣಾ ಇಲಾಖೆಯಲ್ಲಿ (ಡಿ.ಆರ್.ಡಿ.ಓ) ಸುಮಾರು ಐವತ್ತು ವರ್ಷಗಳಿಂದ ಸಹಯೋಗ ಹೊಂದಿರುವ ತಮಿಳುನಾಡಿನ ಕೊಯಮುತ್ತೂರು ಮೂಲದ ಮ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪ್ರಥಮ ಬಾರಿಗೆ (ಸ್ಮಾರ್ಟ್ ಇ ಟಾಯ್ಲೆಟ್)ಪರಿಸರ ಯೋಗ್ಯ ಶೌಚಾಲಯವನ್ನು ನಿರ್ಮಾಣ ಮಾಡಿದೆ.ಇದನ್ನು ಮೊಡಿನ್ನೊ ಇನ್ನೋವೇಷನ್ ಇಂಡಿಯಾ ಪ್ರೈವೇಟ್ ಲಿ.ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೊದಲ ಶೌಚಾಲಯವನ್ನು ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ ಅಳವಡಿಸಲಿದೆ. ಸ್ವಚ್ಚ ಭಾರತ ಕಲ್ಪನೆಗೆ ಹೊಸ ಮುನ್ನುಡಿ. ಈ ಕಲ್ಪನೆ ಸಮಾಜದಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗುವ ಜೊತೆಗೆ ನೀರಿನ ಸಂರಕ್ಷಣೆ ಯೊಂದಿಗೆ ಭೂಮಿ ತಾಯಿಯನ್ನು ಸಂಪೂರ್ಣವಾಗಿ ಸ್ವಚ್ಚವಾಗಿಡುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕಲ್ಪನೆಗೆ ಸಂಪೂರ್ಣ ಸಹಕಾರವಾಗಲಿದೆ.ಇದರ ವಿಶೇಷತೆಯೆಂದರೆ ಶೌಚಾಲಯದಲ್ಲಿ ಬಳಸಿದ ನೀರು ಮಾನವ ತ್ಯಾಜ್ಯದೊಂದಿಗೆ ಮ್ಯಾಕ್ ಬಯೋ ಡೈಜೆಸ್ಟರ್ ಮೂಲಕ ಯಾವುದೇ ರೀತಿಯ ವಿದ್ಯುತ್ ಅಥವಾ ಇಂಧನದ ಸಹಾಯವಿಲ್ಲದೆ ಮಾಲಿನ್ಯ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕೂ ಹೆಚ್ಚಿನ ರೀತಿಯಲ್ಲಿ ಶುದ್ದೀಕರಣಗೊಂಡು ಪುನಃ ಸೋಲಾರ್ ಪಂಪಿನ ಮೂಲಕ ಶೌಚಾಲಯದ ಮೇಲಿನ ಟ್ಯಾಂಕಿಗೆ ವರ್ಗಾವಣೆಯಾಗುತ್ತದೆ.ಇದರಿಂದ ಬಳಸಿದ ನೀರನ್ನು ಪುನಃ ಸಂರಕ್ಷಿಸಿದಂತಾಗುತ್ತದೆ. *ಈ ಶೌಚಾಲಯವು ಕೇವಲ ೨೦ ದಿನಗಳಲ್ಲಿ ನಿರ್ಮಾಣ ಮಾಡಬಹುದಾಗಿದ್ದು ೩೦ ವರ್ಷಕ್ಕೂ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ. *ಶೌಚಾಲಯದ ಒಳಗಡೆಯ ವಿನ್ಯಾಸ ಪಂಚತಾರಾ ಹೋಟೆಲ್ಗಳಲ್ಲಿರುವ ಶೌಚಾಲಯದಂತೆ ನೈರ್ಮಲ್ಯದಿಂದ ಕೂಡಿದೆ.ಇದನ್ನು ಗ್ರಾಮದ ವಿದ್ಯುತ್ ಸಂಪರ್ಕ ಇಲ್ಲದ ಯಾವುದೇ ಕೂಡ ನಿರ್ಮಾಣ ಮಾಡಬಹುವುದಾಗಿದೆ.

  • ಒಂದು ಸಾವಿರ ಲೀಟರ್ ಓವರ್ಹೆಡ್ ಟ್ಯಾಂಕ್ ಹೊಂದಿದೆ. *ಅತ್ಯಾಧುನಿಕ ತಾಂತ್ರಕ ವ್ಯವಸ್ಥೆ ಬೆಳಕಿನ ವಿನ್ಯಾಸ ಹೊಂದಿದೆ. *ಸ್ವಯಂ ಚಾಲಿತ ಶೌಚಲಯ ನೀರು,ಪ್ರಾಕ್ರತಿಕ ಗಾಳಿಬೆಳಕು ಸೌಕರ್ಯ ಸೇರಿದಂತೆ ಸಂಪೂರ್ಣ ಪರಿಸರ ಸ್ನೇಹಿ ಕಲ್ಪನೆಯಲ್ಲಿ ಮೂಡಿಬಂದಿದೆ.
Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.