logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಸುಧಾರಿತ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಇತ್ತೀಚಿನ ಪ್ರವೃತ್ತಿಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ

ಟ್ರೆಂಡಿಂಗ್
share whatsappshare facebookshare telegram
6 May 2023
post image

ಬೆಂಗಳೂರು: ಐಸಿಆರ್‌ಎಸಿ - 2023 ಸುಧಾರಿತಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮೇ 2 ಮತ್ತು 3 ರಂದು ಬೆಂಗಳೂರಿನ ಸೈಂಟ್‌ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್‌ ಇನ್‌ಫರ್ಮೇಷನ್ ಸೈನ್ಸ್, ಸೈಂಟ್‌ಜೋಸೆಫ್ ವಿಶ್ವವಿದ್ಯಾಲಯದ ಎಸ್‌ಜೆಯು ಆಡಿಟೋರಿಯಂನಲ್ಲಿ ಆಯೋಜಿಸಿತ್ತು.

ಈ ಸಮ್ಮೇಳನವು ಸಂಶೋಧಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ಸಂಶೋಧನಾ ಆವಿಷ್ಕಾರವನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಲು ಮತ್ತು ಚರ್ಚಿಸಲು ವೇದಿಕೆಯನ್ನು ಒದಗಿಸಿತ್ತು.

ಐಸಿಆರ್‌ಎಸಿ - 2023 ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, ಸೈಂಟ್‌ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ನಡೆಯಿತು. 61 ಸಂಶೋಧನಾ ಪ್ರಬಂಧಗಳು ಮತ್ತು ನೂರಕ್ಕೂ ಹೆಚ್ಚು ಸಂಶೋಧಕರು ಅನನ್ಯ ಆಲೋಚನೆಗಳೊಂದಿಗೆ ಸಾಕ್ಷಿಯಾದರು. ಯುವ ಸಂಶೋಧಕರಿಗೆತಮ್ಮ ವಿಚಾರಗಳನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುವುದು ಸಮ್ಮೇಳನದ ಮುಖ್ಯ ಕಾರ್ಯಸೂಚಿಯಾಗಿದ್ದು ಅದು ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಮಾಜಕ್ಕೆ ಸಹಾಯಕವಾಗಿದೆ.

ಡಾ| ಲಾರೆನ್ಸ್ಜೆಂಕಿನ್ಸ್ ಮುಖ್ಯ ಅತಿಥಿಯಾಗಿದ್ದರು. ಸೈಂಟ್‌ ಜೋಸೆಫ್ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸೆಲರ್‌ ರೆ| ಫಾ| ಸ್ವೀಬರ್ಟ್ ಡಿಸಿಲ್ವಾ ಎಸ್.ಜೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್‌ಜೆಐಐಟಿ ನಿರ್ದೇಶಕ ರೆ| ಫಾ| ಡೆನ್ಜಿಲ್ ಲೋಬೊ ಎಸ್.ಜೆ., ಸೈಂಟ್‌ ಜೋಸೆಫ್ಸ್ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ರೆ| ಡಾ| ಕ್ಷೇವಿಯರ್ ಸವಾರಿಮುತ್ತುಎಸ್.ಜೆ ಗೌರವ ಅತಿಥಿಯಾಗಿದ್ದರು. ಸಂಘಟನಾ ಕಾರ್ಯದರ್ಶಿ ಡಾ| ಶಿವಕಣ್ಣನ್ ಸುಬ್ರಮಣಿ ಸಮ್ಮೇಳನದ ನಡಾವಳಿಗಳನ್ನು ಅನಾವರಣಗೊಳಿಸಿದರು. ಸಮ್ಮೇಳನವು ಪ್ರಖ್ಯಾತ ಭಾಷಣಕಾರರಾದ ಡಾ| ರಾಧಾಕಾಂತ್ ಪಾಧಿ, ಡಾ| ಲಾರೆನ್ಸ್ಜೆಂಕಿನ್ಸ್, ಡಾ| ಸಿಮೋನ್ ಲುಡ್ವಿಗ್, ಡಾ| ಮೊಹಮ್ಮದ್‌ಇಮ್ರಾನ್ ಮತ್ತು ಡಾ| ರೂಬನ್ ಎಸ್ ಮುಂತಾದ ಐದು ಪ್ರಮುಖರ ಟಿಪ್ಪಣಿಗಳನ್ನು ಹೊಂದಿತ್ತು.

ಮೇ 3 ರಂದು ಬಿಗ್‌ಡೇಟಾ ಅನಾಲಿಟಿಕ್ಸ್ ಲ್ಯಾಬ್‌ನಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು, ಡಾ| ಶ್ರೀನಿವಾಸ್ ಭೋಗ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿದವರನ್ನು ಅಭಿನಂದಿಸಿದರು. ಆಳವಾದ ಕಲಿಕೆಯ ತಂತ್ರಗಳನ್ನು ಬಳಸಿಕೊಂಡು ಪ್ರೋಟೀನ್ ಪೆಪ್ಟೈಡ್ ಅನುಕ್ರಮಗಳಿಂದ ಕ್ಯಾನ್ಸರ್ ವಿರೋಧಿ ಪೆಪ್ಟೈಡ್ ಭವಿಷ್ಯ - ಶರ್ವಿನ್‌ ಎ.ಆರ್.; ಬೈನಾನ್ಸ್ನಿಂದ ಎಪಿಐ ಕೀಯನ್ನು ಹೊರತೆಗೆಯುವ ಮೂಲಕ ನೈಜ-ಸಮಯದ ಕ್ರಿಪ್ಟೋ ಕರೆನ್ಸಿಗಳ ಕ್ಯಾಂಡಲ್‌ ಸ್ಟಿಕ್‌ಗಳ ದೃಶ್ಯೀಕರಣ - ಫಿರಾಸ್ ಫಥಪೇಟ್; ಕಾಸ್ಮೆಟಿಕ್ಸ್ ಮಾರಾಟದ ಮುನ್ಸೂಚನೆಯಲ್ಲಿ ಡೇಟಾಅನಾಲಿಟಿಕ್ಸ್ - ಎಮಿಯಾ ಸುಸಾನ್‌ ಜುಬಿ ಇವರಿಗೆ ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ ನೀಡಲಾಯಿತು. ಸಂಘಟನಾ ಕಾರ್ಯದರ್ಶಿ ಡಾ| ಶಿವಕಣ್ಣನ್‌ರವರ ವಂದನಾರ್ಪಣೆಯೊಂದಿಗೆ ಸಮಾರೋಪ ಸಮಾರಂಭ ಮುಕ್ತಾಯವಾಯಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.