



ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು ಉಡುಪಿ ಯ ಇಂದ್ರಾಣಿ ನದಿಯ ಪ್ರವಾಹವು ಉಡುಪಿಯ ನಗರವನ್ನು ಅವರಿಸಿದೆ. ಉಡುಪಿ ಕೊಡಂಕೂರಿನ 7 ನೆ ವಾರ್ಡ್ ಕೌನ್ಸಿಲರ್ ಸಂಪಾವತಿಯ ಕರೆಯ ಮೇರೆಗೆ ಅಗಮಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಇನ್ತಿಯಾಜ್ ಕೋಡಂಕೂರು ಬಳಿ ಪ್ರವಾಹದಲ್ಲಿ ಸಿಲುಕಿದ್ದ ಅನಾರೋಗ್ಯ ಪೀಡಿತ ಹಿರಿಯ ವ್ಯಕ್ತಿ ಕೊಡಂಕೂರಿನ ತೋಮ ಪೂಜಾರಿಯವರನ್ನು ಯನ್ನು ಕಯಾಕ್ ಬೋಟ್ ನಲ್ಲಿ ರಕ್ಷಿಸಿ ಜನಮನ್ನಣೆ ಗೆ ಪಾತ್ರರಾಗಿದ್ದಾರೆ. ನಡುವೆ 75 ಕ್ಕೂ ಹೆಚ್ಚು ಪ್ರವಾಹಕ್ಕೆ ಸಿಲುಕಿದ ಜನರನ್ನು ಸುರಕ್ಷತಾ ಸ್ಥಳಕ್ಕೆ ಕರೆದುಕೊಂಡು ಬಂದು ರಕ್ಷಿಸಿದ್ದಾರೆ.
ಹವಾಮಾನ ಇಲಾಖೆ ರೆಡ್ ಎಲರ್ಟ್ ಘೋಷಣೆ ಬಳಿಕ ಕರಾವಳಿ ಭಾಗದಲ್ಲಿ ಆರಂಭವಾದ ಮಳೆ ವಿರಾಮ ನೀಡದೆ ಎಕಾಏಕಿ ಸುರಿಯುತಿತ್ತು. ಬೆಳಗ್ಗೆ ಯಿಂದ ಕಯಾಕ್ಬ ಮೂಲಕ ರಕ್ಷಣೆಗೆ ಸಾಹಸಕ್ಕೆ ಇಳಿದ ಇನ್ತಿಯಾಜ್ ಕೆಮ್ಮಣ್ಣು , ನಿಟ್ಟೂರು, ಕೊಡಂಕೂರು, , ತಾರಕಟ್ಟೆ , ಕೊಡವೂರು ನಿಟ್ಟೂರು ಕಾಂಚನ ಹೂಂಡಾಯಿ ಶೋ ರೂಂ ಹಿಂಭಾಗ ದಲ್ಲಿನ 70 ಕ್ಕು ಹೆಚ್ಚು ಜನರನ್ನು ರಕ್ಷಿಸಿದ್ದಾರೆ.
2020 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಘಟಿಸಿದ ಸ್ವರ್ಣ ನದಿ, ಇಂದ್ರಾಣಿ ನದಿಗಳ ಪ್ರವಾಹದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರನ್ನು ಇನ್ತಿಯಾಜ್ ಕೆಮ್ಮಣ್ಣು, ಇಲ್ಯಾಸ್ , ಅಣ್ಣತಮ್ಮಂದಿರು ರಕ್ಷಿಸಿದ್ದರು.ಇವರ ಸಾಹಸವನ್ನು ಮನಗಂಡು ಅಂದಿನ ಜಿಲ್ಲಾಧಿಕಾರಿ ಜಿ ಜಗದೀಶ್ ಇನ್ತಿಯಾಜ್ ಕೆಮ್ಮಣ್ಣು ಅವರನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದರು.ಇವರು ಕೆಮ್ಮಣ್ಣು ತೂಗು ಸೇತುವೆ ಬಳಿ ವಾಟರ್ ಅಡ್ವೆಂಚರ್ ಕೆಮ್ಮಣ್ಣು ಕಯಾಕಿಂಗ್ ಸಂಸ್ಥೆ ನಡೆಸುತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.