



ಶ್ವೇತಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಒಂದು ಸಾಧನೆ ಮಾಡಬೇಕೆಂದರೆ ನಮ್ಮ ಪರಿಶ್ರಮ ಎಷ್ಟೋ ಮುಖ್ಯ ವಾಗಿ ಇರುತ್ತದೆಯೇ ಹಾಗೆ ಇತರರ ಅ ಸಾಧನೆಗೆ ನೀಡುವ ಸಲಹೆ, ಸಂದೇಶ ಗಳು ಸಾಧನೆ ಮಾಡಲು ಸ್ಫೂರ್ತಿಯಾಗಿ ಇರುತ್ತದೆ ಅ ಕಾಣದ ಕೈಗಳು ನೀಡಿದ ಸಲಹೆಗಳು ಸಾಧನೆ ಮಾಡಲು ಸಹಾಯಕವಾಗಿರುತ್ತದೆ ಕ್ಷೇತ್ರ ಯಾವುದೇ ಆಗಿರಲಿ ಅದರಲ್ಲಿ ನಾವು ಬೆಳವಣಿಗೆ ಹೊಂದಬೇಕೆಂದರೆ ಇತರರ ಸಹಾಯ ಬೇಕೆಬೇಕು. ಉದಾಹರಣೆಗೆ ಒಂದು ಸಣ್ಣ ಗಿಡ,ಮರವಾಗಿ ಬೆಳವಣಿಗೆಯಾಗಬೇಕಾದರೆ ನೀರು, ಗಾಳಿ, ಬೆಳಕು, ಪ್ರಮುಖವಾಗಿರುತ್ತದೆ ಅ ಬೇರುಗಳ ಬೆಳವಣಿಗೆ ಈ ಎಲ್ಲಾ ಅಂಶಗಳು ಮುಖ್ಯವಾಗಿರುತ್ತದೆ ಈ ಎಲ್ಲಾ ಅಂಶಗಳಿಂದ ಗಿಡ ಮರವಾಗಿ ಬೆಳೆಯುತ್ತದೆ ಅ ಗಿಡ ಮರವಾಗಿ ಬೆಳೆಯಲು ಅಷ್ಟೊಂದು ಅಂಶಗಳು ಮುಖ್ಯವಾಗಿ ಬೇಕಾಗುತ್ತದೆ ಹಾಗೆಯೇ ನಮ್ಮ ಸಾಧನೆಗಳಿಗೆ ನಮಗೇ ತಿಳಿಯದ ಕಾಣದ ಕೈಗಳು ಸಹಾಯ ಮಾಡುತ್ತದೆ. ಅವುಗಳನ್ನು ಗೌರವಿಸುದು ಅಷ್ಟೇ ಮುಖ್ಯವಾಗಿರುತ್ತದೆ.ಯಾವುದೇ ಕೆಲಸವನ್ನು ಆಗಲಿ ಇತರ ಹೆಚ್ಚಿನ ಕೈ ಗಳು ಸೇರಿದರೆ ಅ ಕೆಲಸ ಶೀಘ್ರವಾಗಿ ಪೂರ್ಣವಾಗುತ್ತದೆ. ಒಂದು ಕಲ್ಲು ಸುಂದರ ಶಿಲೆಯಾದ ಬಳಿಕ ಎಲ್ಲರ ಕೈಯಿಂದ ಪೂಜೆ, ಅಲಂಕಾರವನ್ನು ಮಾಡಿಸಿಕೊಳ್ಳುವ ಅದ್ರಷ್ಟವನ್ನು ಪಡೆಯುತ್ತದೆ. ಅದಕ್ಕೆ ಕಾರಣ ಒಂದು ಶಿಲ್ಪಿ ಆತನ ಪರಿಶ್ರಮದಿಂದ,ದಿನನಿತ್ಯ ಛಲ ಬಿಡದಂತೆ ಕೆಲಸವನ್ನು ಮಾಡಿದರಿಂದ ಅ ಕಲ್ಲಿಗೆ ಒಂದು ಅದ್ಬುತ ಶಿಲೆಯಾಗಿ ಮಾರ್ಪಡುತ್ತಾದೆ ಪ್ರತಿಯೊಂದು ಕಾರ್ಯಗಳಲ್ಲಿ ನಾವು ಮುಂದೆ ನಡೆಯಲು ನಮಗೆ ಪ್ರೋತ್ಸಾಹ, ನೀಡುವವರು ಬೇಕು ಆಗ ಅ ಕೆಲಸವನ್ನು ಮುಂದೆ ನಡೆಸಿಕೊಂಡು ಹೋಗಲು ಸಹಾಯ ವಾಗಿರುತ್ತದೆ.ಗೆಲುವು ಸಿಗದೇ ಇರಬಹುದು ಆದರೆ ಅವರ ಪ್ರೋತ್ಸಾಹ ಇನ್ನು ಹೆಚ್ಚಿನ ಸಾಧನೆ ಮಾಡಲು ಉತ್ಸವನ್ನು ನೀಡಬಹುದು . ಕಣ್ಣನ ಮುಂದಿನ ಸಾಧನೆಗಿಂತ ಬೆನ್ನ ಹಿಂದೆ ಇರುವ ಕೈ ಗಳು, ನೀಡುವ ಪ್ರೋತ್ಸಾಹ ತುಂಬಾ ಮುಖ್ಯವಾಗಿರುತ್ತದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.