logo
WhatsApp Image 2026-04-02 at 14.46.04.jpeg
hindalco everlast.jpeg

ವಿಷಯಂತಾರ ಮಾಡಿ ಹೇಳಿಕೆ ನೀಡುವ ಬಿಜೆಪಿ ಕಾರ್ಯದರ್ಶಿ ಮುಗ್ದರೋ ಅಥವಾ ಮೂರ್ಖರೋ? ಎಂಬ ಸಂಶಯ‌ ಮೂಡುತ್ತದೆ - ತಿರುಗೇಟು‌ ನೀಡಿದ ಕಾಂಗ್ರೆಸ್ ವಕ್ತಾರ ಶುಭದರಾವ್

ಟ್ರೆಂಡಿಂಗ್
share whatsappshare facebookshare telegram
1 Jul 2023
post image

ಕಾರ್ಕಳ ಶಾಸಕ ಸುನೀಲ್ ಕುಮಾರ್ ರವರು ತಮ್ಮ ಪಕ್ಷದ ಕಚೇರಿಯಲ್ಲಿ ‌ಸರಕಾರಿ ಅಧಿಕಾರಿಗಳ ಸಭೆ ನಡೆಸುವ ಬಗ್ಗೆ ಕಾಂಗ್ರೇಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೇವು, ಆದರೆ ಬಿಜೆಪಿ ಕಾರ್ಯದರ್ಶಿ ಪಕ್ಷದ ಕಚೇರಿಯೇ ಸರಕಾರಿ ಕಚೇರಿ ಎಂಬ ರೀತಿಯಲ್ಲಿ‌ ಹೇಳಿಕೆಯನ್ನು ನೀಡಿದ್ದಾರೆ ಇದರಿಂದ ಅವರು ಮುಗ್ದರೋ ಅಥವಾ ಮೂರ್ಖರೋ ಎಂಬ‌ ಸಂಶಯ ವ್ಯಕ್ತವಾಗುತ್ತದೆ ಎಂದು ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಕಟುವಾಗಿ ಪ್ರಶ್ನಿಸಿದ್ದಾರೆ.

ಶಾಸಕ ಸುನೀಲ್‌ ಕುಮಾರ್ ರವರು ತಮ್ಮ ಕಛೇರಿಗೆ ಮಾರಾಟಕಿಲ್ಲದ ಸರಕಾರಿ ಸಿಮೆಂಟ್ ಬಳಸಿದ್ದಾರೆ ಎಂದು ವೀಡಿಯೋ ದಾಖಲೆ ಸಹಿತವಾದ ಅರೋಪ ಬಂದಾಗ ಆ ಕಟ್ಟಡವನ್ನು ನನ್ನ ಕುಟುಂಬದವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು ಹಾಗಾಗಿ ಶಾಸಕರ ಕುಟುಂಬದ ಹೆಸರಿನಲ್ಲಿರುವ ಕಟ್ಟಡ ಸರಕಾರಿ‌ ಕಟ್ಟಡ ಆಗಲು ಹೇಗೆ ಸಾದ್ಯ‌ ಎಂದು ಪ್ರಶ್ನಿಸಿದ್ದಾರೆ?

ಕಾರ್ಕಳ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಶಾಸಕರಿಗೆ ನೀಡಿದ ಕಚೇರಿಯೇ ಅಧಿಕೃತ ಕಚೇರಿಯಾಗುತ್ತದೆ ಅದಲ್ಲದೆ ಪಕ್ಷದ ಚಟುವಟಿಕೆ ನಡೆಯುವ ಇತರ ಯಾವುದೇ ಕಛೇರಿ‌ ಅಧಿಕೃತವಾಗುದಿಲ್ಲ. ಇದನ್ನು ಅರಿತೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರೆ ಮುಂದಿನ ಅನಾಹುತಗಳಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.

ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಕಾಂಗ್ರೇಸ್ ಸರಕಾರದ ಕೊಡುಗೆ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಅರೋಗ್ಯ ಸಚಿವರಾಗಿದ್ದ ಯು.ಟಿ ಖಾದರ್ ಮತ್ತು ರಮೇಶ್ ಕುಮಾರ್ ರವರ ಮುತುವರ್ಜಿಯಿಂದ ಅನುದಾನ ಬಿಡುಗಡೆಯಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ, ವೀರಪ್ಪ ಮೊಯಿಲಿಯವರು ಕೇಂದ್ರದ ಮಂತ್ರಿಯಾಗಿ ಖಾಸಗಿ ಕಂಪನಿಯ ಮೂಲಕ ಇನ್ನೊಂದು ಕಟ್ಟಡಕ್ಕೆ ಅನುದಾನ ಕೊಟ್ಟಿರುವುದು ದಾಖಲೆಯಿಂದ ಗೊತ್ತಾಗುತ್ತದೆ ನಿಮ್ಮ ಸುಳ್ಳು ಹೆಚ್ಚು ದಿನ ಬಾಳದು ಆದರೆ ಆಸ್ಪತ್ರೆಯ ಇಂದಿನ ಪರಿಸ್ಥಿತಿಗೆ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದರು.

ನನ್ನ ಅರೋಪಗಳು ನ್ಯಾಯ ಪರ ಹೊರತು ವೈಯಕ್ತಿಕ ಅಲ್ಲ ಮೊದಲಿನಿಂದಲೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ ಆದರೆ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುವಾಗ ವೈಯಕ್ತಿಕ ಟೀಕೆ ಮಾಡಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ, ಸಮರ್ಪಕ ಉತ್ತರ ನೀಡಲು ಸಾದ್ಯವಾಗದವರು ಮಾತ್ರ ಹೀಗೆ ಮಾಡಲು ಸಾದ್ಯ ಆದರಿಂದಾಗಿ ಸತ್ಯ ಮರೆಮಾಚಲು ಸಾದ್ಯವಿಲ್ಲ ಎಂದು ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.