



ಉಡುಪಿ: ದೇಶದ ಪ್ರಧಾನ ಮಂತ್ರಿ,ನಾಯಕರಾದ ನರೇಂದ್ರ ಮೋದಿ ಜಿ ಪಂಜಾಬ್ ಗೆ ತೆರಳುವ ಸಂದರ್ಭ ರಸ್ತೆಗೆ ಅಡಚಣೆ ಮಾಡಿ ಭದ್ರತಾ ಲೋಪಯೆಸಗಿದ ಪಂಜಾಬ್ ಕಾಂಗ್ರೆಸ್ ಸರ್ಕಾರ ದ ಧೋರಣೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ತೀವ್ರವಾಗಿ ಖಂಡಿಸಿದ್ದಾರೆ.ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರ ದೇಶದ ಪ್ರಧಾನ ಮಂತ್ರಿಗೆ ಭದ್ರತೆ ನೀಡಲು ಅಸಾಧ್ಯವಾದರೆ ಇನ್ನು ಜನಸಾಮಾನ್ಯರಿಗೆ ಪಾಡೇನು?ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ ಪ್ರಜಾಪ್ರಭುತ್ವ ದ ಮೂಲಕ ಆಯ್ಕೆಯಾದ ಪ್ರಧಾನಮಂತ್ರಿ ಘನತೆಗೆ ಮಾಡಿದ ಅವಮಾನ,ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಂಜಾಬ್ ಸರ್ಕಾರದ ಮೇಲೆ ಸೂಕ್ತ ಕ್ರಮಗೊಳ್ಳಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.