



ಕಾರ್ಕಳ : ಕ್ಷೇತ್ರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ ನೀಡುವುದು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು ಅವರು ಕಾರ್ಕಳ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಕ್ಷೇತ್ರದ ಸಾಧನೆಯ ರಿಪೋರ್ಟ್ ಕಾರ್ಡ್ ಅನಾವರಣ ಗೊಳಿಸಿ ಮಾತನಾಡಿದರು.
ಮೂಲಭೂತ ಸೌಕರ್ಯಗಳ ಜೊತೆ ಬೃಹತ್ ಪ್ರಮಾಣದ ಪ್ರಾಜೆಕ್ಟ್ ಗಳನ್ನು ತರುವ ಮೂಲಕ ಅವಿರತ ಪ್ರಯತ್ನ ಮಾಡಲಾಗಿದೆ ,.ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಿ ಹಕ್ಕುಪತ್ರ ವಿತರಿಸುವ ಮೂಲಕ ಜನರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.ಉದ್ಯೋಗ ವಂಚಿತ ಯುವಕರಿಗೆ ಉದ್ಯೋಗ ಸೃಷ್ಟಿ ಸುವ ಸಲುವಾಗಿ 3000 ಕೋಟಿ ವೆಚ್ಚದ ಬೃಹತ್ ಅಪ್ಟಿಕಲ್ ಫೈಬರ್ ಕೆಬಲ್ ಅಧಾರಿತ ಪ್ರಾಜೆಕ್ಟ್ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ದಿನಗಳಲ್ಲಿ ನಿರುದ್ಯೋಗದ ಸಮಸ್ಯೆ ಬಗೆಹರಿಯಲಿದೆ ಎಂದರು.
ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ ಕಾರ್ಕಳದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಕಳ ಉತ್ಸವ , ಥೀಮ್ ಪಾರ್ಕ್, ಮೂಲಕ ಜನರ ಮನ್ನಣೆಗೆ ಪಾತ್ರವಾಗಿದೆ . ಕೋಟಿ ಕಂಠ ಗಾಯನದ ಮೂಲಕ ಜನ ಸಚಿವ ಸುನೀಲ್ ಕುಮಾರ್ ಕರ್ನಾಟಕದ ಮೂಲೆಮೂಲೆಗಳಲ್ಲಿ ಜನಜನಿತರಾಗಿದ್ದಾರೆ . ಅವರ ಸ್ವದೇಶಿ ಚಿಂತನೆ ಸ್ಥಳೀಯ ಉತ್ಪನ್ನಕ್ಕೆ ಕಾರ್ಕಳವನ್ನು ಬ್ರಾಂಡ್ ಮಾಡುವ ಮನಸ್ಸು ಮಾಡಿರುವುದು ಸಂತಸ ತಂದಿದೆ ಎಂದರು
ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಮಾತನಾಡಿ ದರು. ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, , ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ , ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ , ಧಾರ್ಮಿಕ ಮುಖಂಡ ಭಾಸ್ಕರ್ ಜೋಯಿಸ್ , ಪುಂಡಲೀಕ ನಾಯಕ್ , ಉದಯ್ ಕುಲಾಲ್ , ರಾಮಚಂದ್ರ ಅಚಾರ್ಯ ,ಮಹಾಬಲ ಸುವರ್ಣ ಉಪಸ್ಥಿತರಿದ್ದರು .
ಇದೆ ಸಂದರ್ಭದಲ್ಲಿ ಗಾಯಕಿ ಸನ್ನಿದಿ ಚಂದ್ರಶೇಖರ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು .
ನ್ಯಾಯವಾದಿ ರವೀಂದ್ರ ಮೊಯಿಲಿ ಸ್ವಾಗತಿಸಿದರು .ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.ಈದು ಶ್ರೀಧರ ಗೌಡ ಧನ್ಯವಾದ ವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.