


ಕಾರ್ಕಳ: ಕನಸು ಕಾಣುವುದು ತಪ್ಪಲ್ಲ ಆದರೆ ಆ ಕನಸನ್ನು ನನಸು ಮಾಡಿದರೆ ಕಾರ್ಯ ಸಿದ್ಧಿ ಎಂದು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಹೇಳಿದರು . ಅವರು ಕಾರ್ಕಳ ತಾಲೂಕಿನ ಅಜೆಕಾರು ಬಸ್ಸ್ಟ್ಯಾಂಡ್ ಬಳಿಯ ಹೃದಯ ಭಾಗದಲ್ಲಿರುವ ವಿಷ್ಣು ಮೂರ್ತಿ ಬಿಲ್ಡರ್ಸ್ ಹಾಗೂ ಡೆವೆಲಪರ್ಸ್ ನ ಅಜೆಕಾರು ಕಾಂಪ್ಲೆಕ್ಸ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಾಣಿಜ್ಯ ಸಂಕೀರ್ಣಗಳು ನಿರ್ಮಾಣ ದಿಂದ ಹಿಡಿದು ಸ್ಥಳೀಯ ರಿಗೆ ಸೇರಿದಂತೆ ನೂರಾರು ಕೂಲಿಯಾಳುಗಳು ,ಉದ್ಯೋಗಿಗಳಿಗೆ ಕೆಲಸ ಸಿಕ್ಕಂತಾಗುತ್ತದೆ. ಅರ್ಥಿಕತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ. ) ಉದಯ ಕುಮಾರ್ ಶೆಟ್ಟಿ ಮಾತನಾಡಿ ಹಳ್ಳಿ ಯ ಅಭಿವೃದ್ದಿ ಯಲ್ಲಿ ಉದ್ಯಮಿಗಳ ಪಾತ್ರ ಬಹುಮುಖ್ಯ ವಾಗಿದೆ. ಯೋಜನೆ ಹಾಗೂ ಯೊಜನಾ ಗಾತ್ರ ಮುಖ್ಯವಾಗಿದೆ ಎಂದರು.
ಧರ್ಮದರ್ಶಿ ಶ್ರೀರಾಮ್ ಭಟ್ ಮಾತನಾಡಿ ಮನುಷ್ಯ ಜನ್ಮ ದಲ್ಲಿ ಸಾಧನೆಗೆ ಸೀಮಿತ ವಾಗದೆ ಇತರರಿಗೂ ಸಾಮಾಜಿಕ ವಾಗಿ ತೊಡಗಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ವೇದಮೂರ್ತಿ ಅರುಣ್ ಭಟ್ ಎಣ್ಣೆಹೊಳೆ ಮಾತನಾಡಿ ಸಾಮಾಜಿಕವಾಗಿ ತೊಡಗಿಸಿ ಕೊಂಡ ಸದುದ್ದೇಶಗೊಳಿಸುವ ಯೋಜನೆಗಳು ಸಾರ್ಥಕಗೊಳಿಸಲಿ ಎಂದು ಶುಭಹಾರೈಸಿದರು.
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಿವರಾಮ ಜಿ. ಶೆಟ್ಟಿ , ಉದ್ಯಮಿ ಸುಂದರ ಶೆಟ್ಟಿ, ಜೀವನ್ ಶೆಟ್ಟಿ ಜಿ.ಪಂ ನ ಮಾಜಿ ಉಪಾಧ್ಯಕ್ಷ, ಡಾ| ಸಂತೋಷ್ ಕುಮಾರ್ ಶೆಟ್ಟಿ, ಮಹಾವಿಷ್ಣುಮೂರ್ತಿ ದೇವಸ್ಥಾನ ಹೆರ್ಮುಂಡೆಯ ಅರ್ಚಕ ರಾಘವೇಂದ್ರ ಭಟ್, ಅಜೆಕಾರು ಪವಿತ್ರ ಹೃದಯದ ಇಗರ್ಜಿ ಧರ್ಮಗುರು ರೆ| ಫಾ| ಪ್ರವೀಣ್ ಅಮೃತ್ ಮಾರ್ಟಿಸ್ , , ಜುಮ್ಮಾ ಮಸೀದಿಯ ಖತೀಬ್ ಬಹು! ಉಮರ್ ಪಾರುಕ್ ಜವಾಹಾರಿ , ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ರವಿ, ,ಮರ್ಣೆ ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನ್ಸಸ್, ಉದ್ಯಮಿ ಪಿ. ಹಾಜಿ. ಜೀವನ್‌ಶೆಟ್ಟಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಸಬೆಯಲ್ಲಿ ಕಟ್ಟಡ ಪಾಲುದಾರರಾದ ಸುಧಾಕರ್ ಶೆಟ್ಟಿ , ಹಾಗೂ , ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪ್ರೇಮಾನಂದ ನಾಯಕ್ ಹಾಗೂ ಅವರು ಅವರನ್ನು ಸನ್ಮಾನಿಸಲಾಯಿತು. ಸುಹಾಸ್ ಶೆಟ್ಟಿ ಮುಟ್ಲುಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಕ್ಷ , ವೃದ್ದಿ ಪ್ರಾರ್ಥಿಸಿದರು. ಹರೀಶ್ ನಾಯಕ್ ಸ್ವಾಗತಿಸಿದರು. ಶ್ರೀಕಾಂತ್ ಭಟ್ ಧನ್ಯವಾದ ವಿತ್ತರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.