logo
WhatsApp Image 2026-04-02 at 14.46.04.jpeg
hindalco everlast.jpeg

ಈದು ಹಾಲು ಉತ್ಪಾದಕರ ಸಂಘ ವಾರ್ಷಿಕ ಸಭೆ

ಟ್ರೆಂಡಿಂಗ್
share whatsappshare facebookshare telegram
31 Aug 2023
post image

ಈದು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ವಾರ್ಷಿಕ ಸಾಮಾನ್ಯ ಸಭೆ ಇಂದು ಸಂಘದ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯ ಮುಂಭಾಗದಲ್ಲಿ ಜರುಗಿತು. ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಸಂಘ ಸ್ಥಾಪನೆ ಪೂರ್ವ ಕೆಲಸ ಕಾರ್ಯದ ಬಗ್ಗೆ ತಿಳಿಸಿ, ಮುಂದಿನ ಯೋಜನೆಗಳಿಗೆ ಸಹಕಾರ ಕೋರಿದರು. ಮುಖ್ಯ ಅತಿಥಿಗಳಾಗಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ ಮಾತನಾಡಿ, ನಂದಿನಿ ಲವಣ ಮಿಶ್ರಣ ಬಳಕೆ, ಒಕ್ಕೂಟದ ಯೋಜನೆಗಳ ಬಗ್ಗೆ ವಿವರಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಕುಮಾರಿ ಅಶ್ವಿನಿ ಇವರು, ಸಂಘದ ಉಪವಿಧಿಯನ್ನು ಮಂಡಿಸಿ, ಸಂಘದ ಕಾರ್ಯ ಚಟುವಟಿಕೆ, ಉದ್ದೇಶಗಳ ಬಗೆಗೆ ತಿಳಿಸಿದರು. ಗೋಪಾಲ್ ಸುವರ್ಣ ಲೆಕ್ಕಪತ್ರ ವಾಚಿಸಿದರು. ಉಪಾಧ್ಯಕ್ಷ ಹೊನ್ನಯ್ಯ ಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ್ ಜೈನ್, ಸುರೇಶ ಮಡಿವಾಳ, ಸಂತೋಷ್ ಕುಲಾಲ್ ಬನ್ನಡ್ಕ, ಜಯರಾಮ್ ಎಮ್.ವಿ, ರಮೇಶ ಎಮ್.ಕೆ, ಅರುಣ್ ದೇವಾಡಿಗ, ಲೋಲಾಕ್ಷಿ ಸತೀಶ್ ಪೂಜಾರಿ, ಸುಮನ ಹೆಗ್ಡೆ, ಶಾಂತಿಪ್ರಸಾದ್ ಜೈನ್, ಹರೀಶ್ ಪೂಜಾರಿ ಬಾಕ್ಯರೋಡಿ ಉಪಸ್ಥಿತರಿದ್ದರು. ಶ್ರೀಮತಿ ಸುಮತಿ ಪ್ರಾರ್ಥಿಸಿದರು, ಸಂಘದ ಸದಸ್ಯ ಪ್ರಶಾಂತ ಚಿತ್ತಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಾಲಗಂಗಾಧರ ಬಿ ಗೌಡ ವಂದಿಸಿದರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.