



ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಐಟಿ ಅಧಿಕಾರಿಗಳು ಪರೋಕ್ಷವಾಗಿ ಬಿಗ್ ಶಾಕ್ ನೀಡಿದ್ದಾರೆ ರಾಜ್ಯದಲ್ಲಿ ಡಿಸೈನ್ ಬಾಕ್ಸ್ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸೈನ್ ಬಾಕ್ಸ್ ಕಂಪನಿ ಮುಖ್ಯಸ್ಥ ನರೇಶ್ ಅರ್ಗವಾಲ್ ಡಬ್ಲು ಮ್ಯಾರಿಯಟ್ ಹೋಟೆಲ್ ಮೇಲೂ ದಾಳಿ ನಡೆದಿದೆ.ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿಯಿರುವ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ 6:30ರ ಸುಮಾರಿಗೆ 2 ಕಾರುಗಳಲ್ಲಿ ಬಂದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸೈನ್ ಬಾಕ್ಸ್ ಎಂಬ ಪಿಆರ್ ಕಂಪನಿಗೂ ಹಾಗೂ ಡಿ.ಕೆ. ಶಿವಕುಮಾರ್ ಗೂ ಪರೋಕ್ಷ ಸಂಬಂಧವಿದೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮನ್ನ ಸಿಎಂ ಅಭ್ಯರ್ಥಿ ಎಂದು ತೋರಿಸಿಕೊಳ್ಳಲು ಮುಂದಾಗಿದ್ದರು. ಡಿಕೆಶಿಯನ್ನು ಸಿಎಂ ಅಭ್ಯರ್ಥಿ ಎಂದು ಪ್ರಚಾರ ಮಾಡುವ ಕೆಲಸವನ್ನು ಇದೇ ಡಿಸೈನ್ಸ್ ಬಾಕ್ಸ್ ಕಂಪನಿ ಮಾಡುತ್ತಿತ್ತು. ಇದೀಗ ಈ ಕಂಪನಿಯ ಮೇಲೆ ನಡೆದಿರುವ ದಾಳಿ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.