logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮತ್ತೆ ಸುರಿಯುತಿದೆ ಮಳೆ...........

ಟ್ರೆಂಡಿಂಗ್
share whatsappshare facebookshare telegram
23 Jul 2023
post image

ಸುರಿಯುತಿದೆ ಮಳೆ... ಭೂರಮೆಯ  ತೊಳೆಯಲು ಕೊಳೆ...

ಬಣ್ಣವ ಪಡೆಯಿತು ಹೊಳೆ ಅಹಾ ! ಭೂಮಿಗಿಂದು  ಸ್ವರ್ಗದ ಕಳೆ......

ಗಡಗಡ ಗುಡುಗುವ ಆಗಸ , ಓಟಕಿತ್ತ  ಮೋಡಗಳ ರಭಸ , ಚಟ್ಟನೆ  ಸಿಡಿಯುವ ಸಿಡಿಲು, . ಅಹಾ ! ನಭಕ್ಕಿದು ಸ್ವರ್ಗದ ಕಳೆ ..

ಹೊದಿಸಿದೆ ಭುವಿಗೆ ಹಸಿರಿನ ಸೀರೆ , ಹೊದ್ದುಮಲಗಿದ ಸೌಂದರ್ಯವ ಕಂಡು ನಕ್ಕಳು ನೀರೇ ಗುನುಗುವ ಕೀಟಗಳ ಕಂಪು, ಸಂತಸದಿ ಪುಟಿಯುವ ಹಸುಗಳ ಗುಂಪು, ಅಹಾ! ಮನಸಾರೆ ಸವಿಯೋಣ ಬಾರೆ ,

ಮನದಾಳದಲಿ ಮೂಡಿದೆ ಪ್ರಶ್ನೆಯೊಂದು , ಪ್ರಸ್ತಾಪಿಸಲೆ ನಿಮ್ಮೆದುರು ನಾನಿಂದು , ಎಲ್ಲಾ ಕೊಳೆಯನು ತೊಳೆವ ಮಳೆ , ತೊಳೆಯಿತೇ .... ಮಾನವನ ಅಂತರಂಗದ ಕೊಳೆ

......ಜಿ.ಪಿ.ಕೆ

ಜಿ.ಪಿ.ಕೆ ಎಂದು ಕರೆಯಲ್ಪಡುವ ಲೇಖಕ. ಡಾ. ಗುರುಪ್ರಸಾದ್ ಕಳ್ತೂರು . ಇವರು ಮೂಲತಃ ಹೆಬ್ರಿ ತಾಲೂಕಿನ ಕಳ್ತೂರು ಪ್ರದೇಶದವರು. ಪ್ರಸ್ತುತ ಮಣಿಪಾಲದಲ್ಲಿ ವೈದ್ಯರಾಗಿದ್ದು ಬರಹದಲ್ಲಿ ಅತಿ ಆಸಕ್ತಿ. ಹವ್ಯಾಸಿ ಹಾಡುಗಾರರು ,ಛಾಯಾಗ್ರಾಹಕ, ಚಾರಣಿಗರು ಕೂಡ . ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡವರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.