


ಇಷ್ಟು ದಿನ ಸುದ್ದಿಯಲ್ಲಿದ್ದ ಪುಷ್ಪಾ 2 ಈಗ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈ ಸಿನಿಮಾದ ನಟ ಅಲ್ಲು ಸಲ್ಲು ಈಗ ಸದ್ಯದ ಕೇಂದ್ರಬಿಂದು. ಪುಷ್ಪ 2’ ಸಿನಿಮಾದ ಬೆನಿಫಿಟ್ ಶೋ ವೇಳೆ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿದ ವೇಳೆ ಮಹಿಳೆಯೊಬ್ಬರು ನಿಧನರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದು, ಅಲ್ಲು ಅರ್ಜುನ್ ಕೆಲ ದಿನಗಳ ಕಾಲ ಜೈಲು ವಾಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಪೊಲೀಸರ ಹೇಳಿಕೆ ಇಲ್ಲಿದೆ.
ಮಹಿಳೆಯ ಸಾವಿಗೆ ಕಾರಣವಾದ ಕಾರಣ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದು, ಅಲ್ಲು ಅರ್ಜುನ್ ಅನ್ನು ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಅದು ಸುಳ್ಳಾಗಿದೆ.
ಅಲ್ಲು ಅರ್ಜುನ್ ಬಂಧನದ ಬಗ್ಗೆ ಮಾತನಾಡಿರುವ ಹೈದರಾಬಾದ್ ಸಿಪಿ ಸಿವಿ ಆನಂದ್, ‘ಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿದೆ. ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಅದೇ ಕಾರಣಕ್ಕೆ ಮಹಿಳೆಯ ಸಾವಾಗಿದೆ. ಇದೀಗ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಅಲ್ಲು ಅರ್ಜುನ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದಿದ್ದಾರೆ.
ಆ ಮೂಲಕ ಅಲ್ಲು ಅರ್ಜುನ್ ಗೆ ಸ್ಟೇಷನ್ ಬೇಲ್ ನೀಡುವುದಿಲ್ಲ ಬದಲಿಗೆ ನ್ಯಾಯಾಂಗ ಬಂಧನಕ್ಕೆ ನೀಡುವುದನ್ನು ಪೊಲೀಸರು ಖಾತ್ರಿಪಡಿಸಿದ್ದಾರೆ. ಅಲ್ಲು ಅರ್ಜುನ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಲ್ಲಿ ಕನಿಷ್ಟ 14 ದಿನಗಳ ಕಾಲ ಅವರು ಜೈಲು ವಾಸ ಅನುಭವಿಸಬೇಕಿರುತ್ತದೆ. ಆ ಬಳಿಕ ಜಾಮೀನಿಗೆ ಅವರು ಪ್ರಯತ್ನಿಸಬಹುದಾಗಿರುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.