



ಸೂಪರ್ ಸ್ಟಾರ್ ರಜನಿಕಾಂತ್ ಅವರ ನಟನೆಯ ಬಹುನಿರೀಕ್ಷಿತ ಜೈಲರ್ ಚಿತ್ರ ಆಗಸ್ಟ್ 10ರಂದು ಬಿಡುಗಡೆಯಾಗಲಿದ್ದು, ಈ ಪ್ರಯುಕ್ತ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿವೆ.
ಖಾಸಗಿ ಕಂಪನಿ ತನ್ನ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರದ ಫೋಟೋ ವೈರಲ್ ಆಗಿದೆ. ‘ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಉಚಿತ ಟಿಕೆಟ್ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್ ಸ್ಟಾರ್’ ಎಂದು ಬರೆದಿರುವ ನೋಟೀಸ್ ವೈರಲ್ ಆಗಿದೆ. ಈ ಕಂಪನಿಯ ಚೆನೈ, ಬೆಂಗಳೂರು ಮುಂತಾದ ಪ್ರದೇಶಗಳ ಶಾಖೆಗಳಿಗೂ ರಜೆ ಅನ್ವಯ ಆಗುತ್ತದೆ ಎಂದು ಈ ನೋಟೀಸ್ನಲ್ಲಿ ತಿಳಿಸಲಾಗಿದೆ.
ರಜನಿಕಾಂತ್ ಅವರ ಸಿನಿಮಾಗಳಿಂದ ಮಾತ್ರ ಈ ರೀತಿ ಹವಾ ಸೃಷ್ಟಿಸಲು ಸಾಧ್ಯ ಎಂದು ಫ್ಯಾನ್ಸ್ ಹಿರಿಹಿರಿ ಹಿಗ್ಗುತ್ತಿದ್ದಾರೆ. ಜೈಲರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡಾ ನಟಿಸಿದ್ದು,.ಕರ್ನಾಟಕದಲ್ಲೂ ಈ ಸಿನಿಮಾದ ಬಗ್ಗೆ ಹೈಪ್ ಹೆಚ್ಚಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.