



ಕಾರ್ಕಳ : ಕನ್ನಡ ಕಾವ್ಯ ಪ್ರಪಂಚದಲ್ಲಿ ಲಕ್ಷ್ಮೀಶನ ಜೈಮಿನಿ ಭಾರತ ಹಲವು ನೆಲೆಗಳಿಂದ ಸ್ಪೂರ್ತಿಯ ಆಕರವಾಗಿದೆ .ಭಾಷಾ ಪಾಂಡಿತ್ಯದಿಂದ , ಅನುಪಮ ಕಲ್ಪನಾಶೀಲತೆಯಿಂದ , ಕಾವ್ಯದಲ್ಲಿನ ಪದಪ್ರಯೋಗ , ಪ್ರಾಸ ಸೌಂದರ್ಯ , ನಾದಮಯ ಅಭಿವ್ಯಕ್ತಿ , ಚಿಂತನೆಯ ಪ್ರೌಢತೆ ಇವೆಲ್ಲ ಮುಂಬರುವ ಹಲವು ತಲೆಮಾರುಗಳಿಗೆ ಸಹಸ್ರ ಕವಲುಗಳ ಒಂದು ದೊಡ್ಡ ಒರತೆಯಾಗಿದೆ ಎಂದು ವಿದ್ವಾಂಸ , ಅಷ್ಟಾವಧಾನಿ ಡಾ . ಕಬ್ಬಿನಾಲೆ ವಸಂತ ಭಾರದ್ವಾಜ ನುಡಿದರು . ಅವರು ಗುಪ್ತಗಾಮಿನಿ ಸಾಹಿತ್ಯ ಶಾಲೆ ಈದು ಕಾರ್ಕಳ ವತಿಯಿಂದ ಅನಂತಶಯನ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾಬಾಯಿ ನೆನಪಿನ ಕಾರ್ಯಕ್ರಮದಲ್ಲಿ ' ಜೈಮಿನಿ ಭಾರತ ಕಾವ್ಯ ಸೌಂದರ್ಯ ' ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು . ಕಾರ್ಕಳ ತಾಲೂಕು ಚಿತ್ಪಾವನ ಬ್ರಾಹ್ಮಣ ಸಮಾಜದ ಅಧ್ಯಕ್ಷ ರತ್ನಾಕರ ಮರಾಠೆ , ಗಾಯಕ ಅನಂತಪದ್ಮನಾಭ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು . ಶ್ರಾವಣಿ ಶಾಸ್ತ್ರಿ ಸ್ವಾಗತಿಸಿದರು .ಕೆ . ಶ್ರೀಕರ ಭಟ್ ಪ್ರಾಸ್ತಾವಿಕ ಮಾತನಾಡಿದರು .ವಿಜಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು .ಜಗದೀಶ ಗೋಖಲೆ ವಂದಿಸಿದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.