logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಜನಸೇವೆ ಜನ ಮಾನಸದಲ್ಲಿ ಉಳಿಯಬೇಕು,: ರಾಜೇಶ್ ಶೆಣೈ

ಟ್ರೆಂಡಿಂಗ್
share whatsappshare facebookshare telegram
10 Nov 2021
post image

ಕಾರ್ಕಳ: ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮನುಷ್ಯನಿಗೆ ಇರಬೇಕೇ ಹೊರತು ಆತನಲ್ಲಿ ಐಶ್ವರ್ಯ ಮಾತ್ರ ಇದ್ದರೇ ಪ್ರಯೋಜನ ಇಲ್ಲ ಅದರ ಸದ್ಬಳಕೆ ಆಗಬೇಕು ಆಗ ಮಾತ್ರ ಆ ಐಶ್ವರ್ಯಕ್ಕೆ ಬೆಲೆ ಬರುತ್ತದೆ.ನಾವು ಮಾಡುವ ಸಮಾಜ ಸೇವೆ ಸಮಾಜ ಮುಖಿಯಾಗಿ ಜನ ಮಾನಸದಲ್ಲಿ ಉಳಿಯಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ತಿಳಿಸಿದರು ಇವರು ಕಾರ್ಕಳದ ಎಸ್ ವಿ ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಇಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು ಸಮಾಜದ ಆಗುಹೋಗುಗಳ ಬಗ್ಗೆ ನಾವು ಸ್ಪಂದಿಸುವ ಗುಣಗಳನ್ನು ನಾವು ಹೊಂದಬೇಕು .ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುವುದರಲ್ಲಿ ನಮ್ಮ ಸಂತೋಷ ಕಾಣುವಂತಾಗಬೇಕು ಆಗ ಖಂಡಿತವಾಗಿಯೂ ನಮ್ಮ ಜೇವನ ಸಾರ್ಥಕವಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್ ಮಿಥುನ್ ಹೆಗ್ಡೆ ‌ ರವರು, ಕಳೆದ 4 ತಿಂಗಳಲ್ಲಿ ಅಧ್ಯಕ್ಷ ರಾಜೇಶ್ ಶೆಣೈ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಘಟಕ ವು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕನ್ನಡ ನಾಡು ನುಡಿ ಜೊತೆಗೆ ಸಮಾಜದ ಬಡಜನತೆ ,ವಿದ್ಯಾರ್ಥಿಗಳು,ಹಾಗೂ ಶ್ರಮಿಕ ವರ್ಗದ ಜನರಿಗೆ ಯಾವುದೇ ಪ್ರತಫಲಾಪೇಕ್ಷೆ ಇಲ್ಲದ ನಿರಂತರ ಒಂದಲ್ಲ ಒಂದು ಸಹಾಯವನ್ನು ನೀಡುತ್ತಿರುವ ರಾಜೇಶ್ ಶೆಣೈ ನಿಜವಾಗಿಯೂ ಅಭಿನಂದನಾರ್ಹರು ಎಂದರು ಈ ಸಂಧರ್ಭದಲ್ಲಿ ಎಸ್ ವಿ ಟಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜೇಶ್ ಶೆಣೈ ಯವರು ಲಯನ್ಸ್ ಕ್ಲಬ್ ಮುಖಾಂತರ ಕಂಪ್ಯೂಟರ್, ಪ್ರಿಂಟರ್, ಯೂಪಿಎಸ್ ಹಾಗೂ ಸುಮಾರು 300 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು ವೇದಿಕೆಯಲ್ಲಿ ಎಸ್‌ ವಿ ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಂಡಳಿ ಕಾರ್ಯದರ್ಶಿ ಕೆ ಪಿ ಶೆಣೈ, ಟ್ರಸ್ಟಿ ರವೀಂದ್ರ ಪೈ ಲಯನ್ಸ್ ವಲಯಾಧ್ಯಕ್ಷ ಸುಭಾಸ್ ಸುವರ್ಣ,ಕೋಶಾಧಿಕಾರಿ ಪ್ರಕಾಶ್ ಪಿಂಟೋ ಡಾ.ರಾಬರ್ಟ್ ಡಿಮೆಲ್ಲೊ ಉಪಸ್ಥಿತರಿದ್ದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.