logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳನ ಚಂದ್ರ ಫೋಬೋಸ್‌ನಿಂದ ಮಾದರಿ ತರಲು ಜಪಾನ್ ಬಾಹ್ಯಾಕಾಶ ನೌಕೆ ಉಡಾವಣೆ

ಟ್ರೆಂಡಿಂಗ್
share whatsappshare facebookshare telegram
20 Oct 2026
post image

ಟೋಕಿಯೋ (ಜಪಾನ್): ಮಂಗಳ ಗ್ರಹದ ಚಂದ್ರನ ಅನ್ವೇಷಣೆ ನಡೆಸಿ, ಅಲ್ಲಿನ ಮಣ್ಣು, ಧೂಳು ಮತ್ತು ಕಲ್ಲಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶದಿಂದ ಜಪಾನ್ ಬಾಹ್ಯಾಕಾಶ ನೌಕೆಯೊಂದನ್ನು ಉಡಾವಣೆ ಮಾಡಿದೆ. ಐದು ವರ್ಷಗಳ ಈ ಮಹತ್ವಾಕಾಂಕ್ಷಿ ಕಾರ್ಯಾಚರಣೆಯಲ್ಲಿ ವಿಶ್ವದ ಐದು ಬಾಹ್ಯಾಕಾಶ ಸಂಸ್ಥೆಗಳು ಕೈಜೋಡಿಸಿವೆ.

ಜಪಾನ್ ಬಾಹ್ಯಾಕಾಶ ಅನ್ವೇಷಣಾ ಸಂಸ್ಥೆ (JAXA) ತನೆಗಾಶಿಮಾ ದ್ವೀಪದಲ್ಲಿರುವ ದೇಶದ ಪ್ರಮುಖ ಬಾಹ್ಯಾಕಾಶ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಿದೆ. ಉಡಾವಣೆಯಾದ ಸುಮಾರು ಒಂದು ಗಂಟೆಯ ಬಳಿಕ ನೌಕೆಯು ರಾಕೆಟ್‌ನ ಮೇಲಿನ ಹಂತದಿಂದ ಯೋಜನೆಯಂತೆ ಬೇರ್ಪಟ್ಟಿದ್ದು, ಕಾರ್ಯಾಚರಣೆಯ ಆರಂಭಿಕ ಹಂತ ಯಶಸ್ವಿಯಾಗಿದೆ.

ಈ ಯೋಜನೆಯಡಿ ಮಂಗಳ ಗ್ರಹದ ಎರಡು ನೈಸರ್ಗಿಕ ಉಪಗ್ರಹಗಳಲ್ಲೊಂದಾದ ಫೋಬೋಸ್‌ನಲ್ಲಿ ರೋಬೋಟಿಕ್ ಪರಿಶೋಧಕ ಮತ್ತು ರೋವರ್ ಅನ್ನು ಇಳಿಸಿ ಅನ್ವೇಷಣೆ ನಡೆಸುವ ಗುರಿ ಹೊಂದಲಾಗಿದೆ. ಅಲ್ಲಿನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಮಂಗಳ ಗ್ರಹದ ಅನ್ವೇಷಣೆಯಲ್ಲಿ ಹಲವು ದೇಶಗಳು ಈಗಾಗಲೇ ಯಶಸ್ಸು ಸಾಧಿಸಿವೆ. ಆದರೆ, ಅದರ ಉಪಗ್ರಹಗಳಾದ ಫೋಬೋಸ್ ಮತ್ತು ಡೀಮೋಸ್‌ ಮೇಲೆ ಇಳಿದು ಮಾದರಿಗಳನ್ನು ಸಂಗ್ರಹಿಸುವ ಪ್ರಯತ್ನ ಈವರೆಗೆ ನಡೆದಿಲ್ಲ ಎಂದು ವರದಿಯಾಗಿದೆ.

ಯೋಜನೆ ಯಶಸ್ವಿಯಾದರೆ 2031ರ ವೇಳೆಗೆ ಫೋಬೋಸ್‌ನಿಂದ ಸಂಗ್ರಹಿಸಿದ ಧೂಳು, ಮಣ್ಣು ಮತ್ತು ಕಲ್ಲಿನ ಮಾದರಿಗಳು ಭೂಮಿಗೆ ತಲುಪುವ ನಿರೀಕ್ಷೆಯಿದೆ. ಈ ಮಾದರಿಗಳ ಅಧ್ಯಯನವು ಮಂಗಳ ಗ್ರಹದ ಉಪಗ್ರಹಗಳ ಉಗಮ ಮತ್ತು ಸೌರಮಂಡಲದ ಇತಿಹಾಸದ ಕುರಿತು ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆಯಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.