



ಟೋಕಿಯೊ: ಹತ್ತು ಯೋಧರಿದ್ದ ಜಪಾನ್‌ನ ಮಿಲಿಟರಿ ಹೆಲಿಕಾಪ್ಟರ್ ಗುರುವಾರ ರಾಡಾರ್ ಸಂಪರ್ಕ ಕಳೆದುಕೊಂಡಿದ್ದು, ಕಣ್ಮರೆಯಾಗಿದೆ.
ಒಕಿನಾವಾದ ದಕ್ಷಿಣ ಪ್ರಾಂತ್ಯದಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಜೆ 4.30ರ ಸುಮಾರಿಗೆ ವಿಮಾನ ಕಣ್ಮರೆಯಾಗಿದೆ. ಮಿಲಿಟರಿ ಪಡೆಗಳು ಹೆಲಿಕಾಪ್ಟರ್ ಪತ್ತೆಯಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.
ಹೆಲಿಕಾಪ್ಟರ್ ದಕ್ಷಿಣದ ಕುಮಾಟೊ ಪ್ರದೇಶದ ಮಿಲಿಟರಿ ಶಾಖೆಗೆ ಸೇರಿದ್ದಾಗಿದೆ ಎಂದು ಸರ್ಕಾರಿ ಮಾಧ್ಯಮ ಎನ್‌ಎಚ್‌ಕೆ ವರದಿ ಮಾಡಿದೆ.
ಒಕಿನಾವಾದ ಮಿಯಾಕೊ ದ್ವೀಪದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಒಂದು ಗಂಟೆಯಲ್ಲಿ ಹಿಂದಿರುಗಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.