logo
WhatsApp Image 2026-04-02 at 14.46.04.jpeg
hindalco everlast.jpeg

ಮೇ.5 ರಿಂದ 10ರ ವರೆಗೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಟ್ರೆಂಡಿಂಗ್
share whatsappshare facebookshare telegram
5 May 2023
post image

ಮೇ.5 ರಂದು ಹಾಲುಹಬ್ಬ, ಮೇ.8ರಂದು ಶ್ರೀ ಮನ್ಮಹಾರಥೋತ್ಸವ

ಉಡುಪಿ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ,ದ ಜಾತ್ರಾಮಹೋತ್ಸವವು ಮೇ.5 ರಿಂದ 10ರ ವರೆಗೆ ನಡೆಯಲಿದೆ..

ಕಾರ್ಯಕ್ರಮ ವಿವರ : ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ದಿನ 21 ಸಲುವ ವೈಶಾಖ ಮಾಸದ ಪೂರ್ಣಮಿತಾ.ಮೇ. 5ರಂದು ಮೊದಲ್ಗೊಂಡು ವೈಶಾಖ ಬಹುಳ ಪಂಚಮಿ ಮೇ.10ರಂದು

ಪರ್ಯಂತ ಶ್ರೀ ಕ್ಷೇತ್ರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಧ್ವಜಾರೋಹಣ ಮಹೋತ್ಸವಗಳು ಕಾರ್ಯಕ್ರಮಗಳು ಜರಗಲಿರುವುದು.

ಧಾರ್ಮಿಕ ಕಾರ್ಯಕ್ರಮಗಳು:

ಮೇ. 5ರಂದು ಪ್ರಾತಃ ಗಂಟೆ 8ಕ್ಕೆ ಧ್ವಜಾರೋಹಣ, ಗಣಯಾಗ, ನಮಕ ಪ್ರಧಾನ ಹೋಮ, ರಾತ್ರಿ ಗಂಟೆ 6.30 ರಿಂದ ಆರಾಧನೆ ಪೂಜೆ, ಪೂರ್ಣಿಮ ಉತ್ಸವ, ರಾತ್ರಿ ಗಂಟೆ 9 ರಿಂದ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮ ಮಂಡಲ, ಭೂತ ಬಲಿ ಇತ್ಯಾದಿ.

ಮೇ.6 ರಂದು ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಆರಾಧನಾ ಬಲಿ.ಮೇ07ರಂದು ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ನಿತ್ಯ ಬಲಿ, ಸವಾರಿ ಬಲಿ, ಮಹಾರಂಗಪೂಜೆ, ಭೂತಬಲಿ.ಮೇ.8ರಂದು ಪ್ರಾತಃ ಸಂಕಷ್ಟಿ ಗಣ ಯಾಗ, ಮಧ್ಯಾಹ್ನ ಗಂಟೆ 12ಕ್ಕೆ ರಥಾರೋಹಣ, ರಾತ್ರಿ ಗಂಟೆ 6 ರಿಂದ ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಟ ಪೂರಾಣ.ಮೇ 9ರಂದು ಪ್ರಾತಃ ಗಂಟೆ 8 ರಿಂದ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ ಇತ್ಯಾದಿ. ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ಓಕುಳಿ, ಅವಭೃತ ಸ್ನಾನ, ಧ್ವಜಾರೋಹಣ.ಮೇ.ರಂದು ಪ್ರಾತಃ ಗಂಟೆ 8 ರಿಂದ ಮಹಾಸಂಪ್ರೋಕ್ಷಣೆ, ಚಂಡಿಕಾ ಯಾಗ, ಮಾರಿ ಪೂಜೆ, ಅನ್ನ ಸಂತರ್ಪಣೆ, ಸಮಾರಾಧನೆ, ರಾತ್ರಿ ಗಂಟೆ 8 ರಿಂದ ರಾತ್ರಿ ಪೂಜೆ, ಮಾರಿ ಪೂಜೆ, ಮಾರಿ ಬಲಿ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.