logo
WhatsApp Image 2026-04-02 at 14.46.04.jpeg
hindalco everlast.jpeg

ಜೆ.ಇ.ಇ ಅಡ್ವಾನ್ಸ್ ಫಲಿತಾಂಶ ಪ್ರಕಟ: ರಾಷ್ಟ್ರಮಟ್ಟದಲ್ಲಿ ಜ್ಞಾನಸುಧಾಕ್ಕೆ ಹತ್ತು ಸಾವಿರದೊಳಗೆ 10 ರ್ಯಾಂಕ್

ಟ್ರೆಂಡಿಂಗ್
share whatsappshare facebookshare telegram
20 Jun 2023
post image

ಸಮೃದ್ಧ್ ನೆಲ್ಲಿಗೆ ಜನರಲ್ ಇ.ಡಬ್ಲು.ಎಸ್ ಕೆಟಗರಿಯಲ್ಲಿ 715ನೇ ರ್ಯಾಂಕ್

ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್‍ನ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಜ್ಞಾನಸುಧಾಕ್ಕೆ 10ಸಾವಿರದೊಳಗಿನ 10ರ್ಯಾಂಕುಗಳು ಬಂದಿರುತ್ತದೆ.

ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ 3918ನೇ ರ್ಯಾಂಕ್, ಪ್ರಣವ್ ಗುಜ್ಜರ್ 5601ನೇ ರ್ಯಾಂಕ್, ಸಮೃದ್ಧ್ ನೆಲ್ಲಿ 5769ನೇ ರ್ಯಾಂಕ್ ಹಾಗೂ ಜನರಲ್ ಇ.ಡಬ್ಲು.ಎಸ್ ಕೆಟಗರಿಯಲ್ಲಿ 715ನೇ ರ್ಯಾಂಕ್, ಒ.ಬಿ.ಸಿ-ಎನ್.ಸಿ.ಎಲ್ ಕೆಟಗರಿಯಲ್ಲಿ ಸಾಯಿ ಲಿಖಿತ್ ರೆಡ್ಡಿ 3947ನೇ ರ್ಯಾಂಕ್, ಅಮೃತ್ ಗೌಡ ಎಂ. ಪಾಟೀಲ್ 4117ನೇ ರ್ಯಾಂಕ್, ಅರ್ಹನ್.ಎ.ಕೆ 7252ನೇ ರ್ಯಾಂಕ್, ಶ್ರೇಯಸ್.ಆರ್.ಗೌಡ 7705ನೇ ರ್ಯಾಂಕ್, ಸೂರ್ಯ ವಿ 7811ನೇ ರ್ಯಾಂಕ್, ಎಂ.ಪಿ.ಪ್ರೀತಮ್ 8619ನೇ ರ್ಯಾಂಂಕ್ ಗಳಿಸಿರುತ್ತಾರೆ.

ಈ ಬಾರಿ ದೇಶಾದಾದ್ಯಂತ 1.80.372 ಅಭ್ಯರ್ಥಿಗಳು ಜೆ.ಇ.ಇ 1 ಮತ್ತು 2ರಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಈ ಪೈಕೆ 36,264 ಮಂದಿ ಬಾಲಕರು ಮತ್ತು 7509 ಬಾಲಕಿಯರು ಸೇರಿ ಒಟ್ಟು 43,773 ಮಂದಿ ಅರ್ಹತೆಯೆನ್ನು ಗಿಟ್ಟಿಸಿಕೊಂಡಿದ್ದಾರೆ.

ಜ್ಞಾನಸುಧಾಕ್ಕೆ ಈಗಾಗಗಲೇ ರಾಷ್ಟಮಟ್ಟದ ನೀಟ್ ಪರೀಕ್ಷೆಯಲ್ಲಿ 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು, P.Éಸಿ.ಇ.ಟಿಯಲ್ಲಿ 105 ವಿದ್ಯಾರ್ಥಿಗಳು 5000ಸಾವಿರದೊಳಗಿನ ರ್ಯಾಂಕನ್ನು ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಎಲ್ಲಾ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದು, ಜ್ಞಾನಸುಧಾ ಪರಿವಾರವು ಹರ್ಷವ್ಯಕ್ತಪಡಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.