



ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಯುಷ್ ಭೌತಶಾಸ್ತ್ರದಲ್ಲಿ 97 ಪರ್ಸನ್ಟೈಲ್ ಪಡೆದು ಒಟ್ಟು96 ಪರ್ಸನ್ಟೈಲ್ ಪಡೆದಿರುತ್ತಾನೆ ಹಾಗೂ ಸುಮಂತ್ ರಸಾಯನಶಾಸ್ತ್ರದಲ್ಲಿ 99.12ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 96ಪರ್ಸನ್ಟೈಲ್ ಪಡೆದಿರುತ್ತಾನೆ. ಹಾಗೆಯೇ ಓಂಕಾರ್ ಪ್ರಭು ಒಟ್ಟು 90.04 ,ಪರ್ಸಂಟೈಲ್, ಹರ್ಷಿತ್ ಖಾರ್ವಿ 88.17,ಪರ್ಸಂಟೈಲ್, ತನಿಷಾ 83.5 ಪರ್ಸಂಟೈಲ್ ಪಡೆದಿರುತ್ತಾರೆ .ಪರೀಕ್ಷೆಗೆ ಕುಳಿತ ಕಾಲೇಜಿನ 5 ವಿದ್ಯಾರ್ಥಿಗಳು ಶೇಕಡಾ 100 ಶೇಕಡಾ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.