logo
WhatsApp Image 2026-04-02 at 14.46.04.jpeg
hindalco everlast.jpeg

ಜ್ಞಾನಸುಧಾ ವಿದ್ಯಾಸಂಸ್ಥೆ ಶೇ. 100 ಫಲಿತಾಂಶ ದಾಖಲು

ಟ್ರೆಂಡಿಂಗ್
share whatsappshare facebookshare telegram
21 Apr 2023
post image

ಕಾರ್ಕಳ : 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಹಾಗೂ ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯು 100% ಫಲಿತಾಂಶ ದಾಖಲಿಸಿದೆ. ಕಾರ್ಕಳ ಸಂಸ್ಥೆಯ ಸ್ಮಯಾ ಸದಾನಂದ್ ಮಾಬೆನ್ ವಿಜ್ಞಾನ ವಿಭಾಗದಲ್ಲಿ 594 (99%) ಅಂಕಗಳಿಸಿ ರಾಜ್ಯಕ್ಕೆ 3ನೇ ರ‍್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾನ್ಯಜೈನ್ 594 (99%) ಅಂಕ ಪಡೆಯುವುದರೊಂದಿಗೆ 4ನೇ ರ‍್ಯಾಂಕ್‌ ಪಡೆದಿರುತ್ತಾರೆ. ಜ್ಞಾನಸುಧಾ ಸಂಸ್ಥೆಗಳ 16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕಿನ ಒಳಗೆ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಸ್ಮಯಾ ಸದಾನಂದ ಮಾಬೆನ್ 99% (594), ಎಂ. ಆರ್. ಯಶಸ್‌ ರೆಡ್ಡಿ 98.50% (591), ಶ್ರೇಯಸ್. ಆರ್. ಗೌಡ 98.50% (591), ಸೃಷ್ಟಿ ಶೆಟ್ಟಿ 98.33% (590), ಹಿತೇಶ್‌ ಆರ್. ನಾಯಕ್ 98.17% (589), ಮಾನ್ಯಶ್ರೀ ಪಿ. 98.17% (589), ಸ್ಪಂದನ ಆರ್. ಶೆಟ್ಟಿ 98% (588), ಸುನಿಧಿ ಕಿಣಿ 98% (588) ಆದ್ಯಾ ದಯಾನಂದ ನಾಯಕ್ 97.84% (587), ಹೃಶಿಕ್ ಎಂ. ಹೆಗ್ಡೆ 97.84% (587) ಮತ್ತು ಜೀವನ್‌ರೆಡ್ಡಿ 97.84% (587), ಹಾಗೂ ವಾಣಿಜ್ಯ ವಿಭಾಗದಲ್ಲಿ ಮಾನ್ಯ ಜೈನ್ 99% (594), ಸಂಕೇತ್ ವಿ. ಕಾಮತ್ 98.50% (591), ಶರಣ್ಯ ಎಸ್. ಹೆಗ್ಡೆ 98.50% (591), ಕೆ. ಆಕಾಶ್ ಪೈ 98% (588) ಅಂಕ ಗಳಿಸಿರುತ್ತಾರೆ.

ಉಡುಪಿ ಜ್ಞಾನಸುಧಾ ಪಿ.ಯು.ಕಾಲೇಜು ತನ್ನ ಪ್ರಥಮ ವರ್ಷದಲ್ಲೇ ಶೇ. 100 ಫಲಿತಾಂಶ ಗಳಿಸಿದ್ದು ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಪೈ 98.16%(589) ಅಂಕ ಗಳಿಸಿದ್ದಾರೆ. ಒಟ್ಟು 632 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 526 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಷಯವಾರು 251 ಉತ್ತರ ಪತ್ರಿಕೆಗೆ 100ಕ್ಕೆ 100 ಅಂಕ ಬಂದಿರುತ್ತದೆ. ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅಭಿನಂದಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.