logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಇಸ್ರೇಲ್‌ನ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು: ಎಪ್ರಿಲ್ ಮೊದಲ ವಾರದಲ್ಲಿ ಸಂದರ್ಶನ ಹಾಗೂ ನೇಮಕಾತಿ

ಟ್ರೆಂಡಿಂಗ್
share whatsappshare facebookshare telegram
13 Mar 2024
post image

ಮಂಗಳೂರು: ಇಸ್ರೇಲ್ ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತೀಯ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2004 ರಿಂದ ಇಸ್ರೇಲಿಗೆ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ‘ಫೆರ್ನಾಂಡಿಸ್ ಗ್ರೂಪ್’, ಇಸ್ರೇಲಿನ ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಭಾರತದಲ್ಲಿ ಅವರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಉದ್ಯೋಗಗಳು: ಶಟರಿಂಗ್ ಕಾರ್ಪೆಂಟರ್ಸ್ -250 ಮಂದಿ ಟೈಲ್ ಮೇಸನ್ಸ್(ಸೆರಾಮಿಕ್)- 250 ಮಂದಿ ಸ್ಟೀಲ್ ಫಿಕ್ಸರ್ಸ್ (ಐರನ್ ಮತ್ತು ಬಾರ್ ಬೆಂಡಿಂಗ್) – 250 ಮಂದಿ ಪ್ಲಾಸ್ಟರ್ ಮೇಸನ್ಸ್ – 250 ಮಂದಿ ಬ್ಲಾಕ್ಕ್ ಮೇಸನ್ಸ್ – 250 ಮಂದಿ ಹೆಲ್ಪರ್ಸ್ – 500 ಮಂದಿ

ಅಭ್ಯರ್ಥಿಗಳು 25 ರಿಂದ 45 ವರ್ಷದವರಾಗಿದ್ದು, ಕಟ್ಟಡ ನಿರ್ಮಾಣದಲ್ಲಿ 2 ರಿಂದ 3 ವರುಷ ಅನುಭವವಿರುವವರು ಇರಬೇಕು. ಅನುಭವ ಇಲ್ಲದವರು ಹೆಲ್ಪರ್ಸ್ ಆಗಿ ಕೆಲಸಮಾಡಲು ಅವಕಾಶವಿದೆ. ಅವರಿಗೆ ಮಂಗಳೂರಿನಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುವುದು. ವೇತನ ಶ್ರೇಣಿಯು 1,50,000 ರಿಂದ 2,00,000 (ಒಂದುವರೆ ಲಕ್ಷದಿಂದ ಎರಡು ಲಕ್ಷದವರೆಗೆ), ವಸತಿ, ಮೆಡಿಕಲ್ ಮತ್ತು ಸಾರಿಗೆ ವ್ಯವಸ್ಥೆ ಕಂಪೆನಿಯು ನೀಡುತ್ತದೆ. ಇಸ್ರೇಲ್ ಸಂದರ್ಶನ: ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ/ಅರ್ಜಿ, ಪಾಸ್‌ಪೋರ್ಟ್ ಕಾಪಿ, ಅನುಭವ ಸರ್ಟಿಫಿಕೇಟ್‌ನೊಂದಿಗೆ – ಫೆರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, ೩ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲೆ, ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ, ವಾಲೆನ್ಸಿಯಾ, ಮಂಗಳೂರು ಇಲ್ಲಿ ಸಂಪರ್ಕಿಸಬಹುದು. ಫೆರ್ನಾಂಡಿಸ್ ಗ್ರೂಪ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈ, ನವದೆಹಲಿ ಅಥವಾ ಕೊಲ್ಕೊತ್ತಾದಲ್ಲಿ ಇಸ್ರೇಲ್ ಮಿನಿಸ್ಟ್ರಿ ಆಫ್ ಕನ್‌ಸ್ಟ್ರಕ್ಷನ್, ಇವರಿಂದ ನಡೆಯುವ ಸಂದರ್ಶನಗಳಿಗೆ ಅವಕಾಶ ಮಾಡಿಕೊಡಲಾಗುವುದು. ಇಸ್ರೇಲಿನಲ್ಲಿ ಸಾವಿರಾರು ಕಟ್ಟಡ ರ್ಮಿಕರಿಗೆ ಉದ್ಯೋಗದ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಗಮನದ ಮೇಲೆ ವೀಸಾ (Visa on arrival) ನೀಡುವ ವ್ಯವಸ್ಥೆ ಇಸ್ರೇಲ್ ಸರಕಾರ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9686675464 / 9686528447 /9731128608 / 9686675469 / 9686675465 / 8341738573 ಸಂಪರ್ಕಿಸಬಹುದು ಎಂದು ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.