logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

RBI ನಲ್ಲಿ ಉದ್ಯೋಗವಕಾಶ!

ಟ್ರೆಂಡಿಂಗ್
share whatsappshare facebookshare telegram
24 Mar 2023
post image

RBI Recruitment 2023: ಬ್ಯಾಂಕ್ ನಲ್ಲಿ ಉದ್ಯೋಗ (bank job) ಬಯಸುತ್ತಿರುವವರಿಗೆ ಸಿಹಿಸುದ್ದಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನೇಮಕಾತಿ ಅಧಿಸೂಚನೆಯನ್ನು (Recruitment Notification) ಬಿಡುಗಡೆ ಮಾಡಿದ್ದು, ಡೆಪ್ಯೂಟಿ ಗವರ್ನರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ (RBI Recruitment 2023). ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಹೆಚ್ಚಿನ ವಿವರ ಇಲ್ಲಿದೆ.

ಹುದ್ದೆಯ ಹೆಸರು: ಡೆಪ್ಯೂಟಿ ಗವರ್ನರ್ (deputy governer)

ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10/4/2023

ವೇತನ ಹಾಗೂ ಭತ್ಯೆ: ರೂ. 2,25,000/- (ಹಂತ 17) ಅಧಿಕಾರದ ಅವಧಿ: ನೇಮಕಾತಿಯು ಮೂರು ವರ್ಷಗಳ ಅವಧಿಯದ್ದಾಗಿದ್ದು, ಹಾಗೇ ವ್ಯಕ್ತಿಯು ಮರು-ನೇಮಕಾತಿಗೆ ಅರ್ಹರಾಗಿರುತ್ತಾರೆ.

ವಿದ್ಯಾರ್ಹತೆ ಹಾಗೂ ಅನುಭವ: • ಹಣಕಾಸು ವಲಯದಲ್ಲಿ ಅತ್ಯಂತ ಹಿರಿಯ ಮಟ್ಟದಲ್ಲಿ ಪೂರ್ಣ ಸಮಯದ ನಿರ್ದೇಶಕ/ ಮಂಡಳಿಯ ಸದಸ್ಯರಾಗಿ ವ್ಯಾಪಕ ಅನುಭವ ಇರಬೇಕು. • ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳಲ್ಲಿ ಕನಿಷ್ಠ ಹದಿನೈದು ವರ್ಷಗಳ ಅನುಭವ ಇರಬೇಕು. • ಸಂಕ್ಷಿಪ್ತಗೊಳಿಸುವುದು ಮತ್ತು ಸಂವಹನ ಮಾಡುವುದು ಸೇರಿದಂತೆ ಹಣಕಾಸಿನ ಕಾರ್ಯಕ್ಷಮತೆಯ ಡೇಟಾದೊಂದಿಗೆ ಕಾರ್ಯನಿರ್ವಹಿಸುವ ಪ್ರಬಲ ಸಾಮರ್ಥ್ಯಗಳನ್ನೂ ಹೊಂದಿರಬೇಕು. • ಸಾರ್ವಜನಿಕ ನೀತಿಯ ವಿಷಯಗಳಲ್ಲಿ ಬಲವಾದ ಮತ್ತು ಸ್ಪಷ್ಟವಾದ ಸಂವಹನ ಕೌಶಲ್ಯಗಳು ಅಗತ್ಯವಾಗಿ ಬೇಕಿದೆ.

ಅರ್ಜಿ ಸಲ್ಲಿಕೆ: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ rbi.org.in ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಭರ್ತಿ ಮಾಡಿ ಅದರೊಂದಿಗೆ ನಿಮ್ಮ ಸಿವಿ, ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೂರು ಉಲ್ಲೇಖಗಳ ಹೆಸರುಗಳು ಮತ್ತು ಸಂಪರ್ಕ ವಿವರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ವಿಳಾಸ: Shri Sanjay Kumar Mishra Under Secretary (BO.I) Department of Financial Services Ministry of Finance 2 nd floor Jeevan Deep Building Parliament Street New Delhi-110 001

ದೂರವಾಣಿ ಸಂಖ್ಯೆ 011- 23747189, ಇಮೇಲ್: [email protected] ಹೆಚ್ಚಿನ ಮಾಹಿತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ rbi.org.in ಗೆ ಭೇಟಿ ನೀಡಿ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.