logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಎಸ್‌ಬಿಐನಲ್ಲಿ ಉದ್ಯೋಗವಕಾಶ

ಉದ್ಯೋಗ
share whatsappshare facebookshare telegram
24 Feb 2023
post image

ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿವಿಧ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಹೊರಡಿಸಿದ್ದು, ಎಸ್‌ಬಿಐ ಅರ್ಹರಿಂದ ಈ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಈ ಉದ್ಯೋಗಾಂಕ್ಷಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಮುನ್ನ ಖಾಲಿ ಇರುವ ಹುದ್ದೆಗಳು, ವೇತನ ಶ್ರೇಣಿ, ವಿದ್ಯಾರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿದಿರುವುದು ಅವಶ್ಯಕ. ಈ ಹುದ್ದೆಗಳಿಗೆ ಫೆಬ್ರವರಿ 23 ರಿಂದ ಮಾರ್ಚ್ 15 ರವರೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಮಾಡಿಕೊಳ್ಳ ಬಹುದು.

ರೆಗ್ಯುಲರ್ ಬೇಸಿಸ್ ಎಸ್‌ಬಿಐ ಎಸ್‌ಒ ಹುದ್ದೆಗಳು ಹೀಗಿವೆ: ಹುದ್ದೆ ಹೆಸರು: ಮ್ಯಾನೇಜರ್ (ರೀಟೇಲ್ ಪ್ರೋಡಕ್ಟ್‌) ಹುದ್ದೆಗಳ ಸಂಖ್ಯೆ : 05 ವಿದ್ಯಾರ್ಹತೆ : ಎಂಬಿಎ / ಪಿಜಿಡಿಎಂ / ಮಾರ್ಕೆಟಿಂಗ್ ವಿಷಯದಲ್ಲಿ ಪಿಜಿಡಿಎಂ ಜತೆಗೆ 5 ವರ್ಷ ಪೋಸ್ಟ್‌ ಹುದ್ದೆಯ ಸ್ಥಳ: ಮುಂಬೈ ಅಭ್ಯರ್ಥಿಗಳು ಕನಿಷ್ಠ 28 ವರ್ಷ ಹೊಂದಿರಬೇಕಾಗಿದ್ದು, ಗರಿಷ್ಠ 38 ವರ್ಷಗಳು. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ನಡೆಸಲಾಗುತ್ತದೆ. ಆ ಬಳಿಕ ಸಂದರ್ಶನ ನಡೆಯಲಿದ್ದು, ಕ್ವಾಲಿಫಿಕೇಶನ್‌ ಜೊತೆಗೆ ಕಾರ್ಯಾನುಭವವನ್ನು ಪರಿಗಣಿಸಲಾಗುತ್ತದೆ.

ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು 23-02-2023 ಆರಂಭಿಕ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು 15-03-2023 ಕೊನೆ ದಿನಾಂಕವಾಗಿದೆ.

ಗುತ್ತಿಗೆ ಆಧಾರಿತ ಎಸ್‌ಬಿಐ ಎಸ್‌ಒ ಹುದ್ದೆಗಳು ಹುದ್ದೆ ಹೆಸರು: ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್) ಹುದ್ದೆಗಳ ಸಂಖ್ಯೆ : 02 ಹುದ್ದೆಯ ಸ್ಥಳ: SBIL, Kolkata ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 28 ವರ್ಷವಾಗಿದ್ದು, ಗರಿಷ್ಠ 55 ವರ್ಷ ಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿ ಜತೆಗೆ 3 ವರ್ಷ ಟೀಚಿಂಗ್ ಕಾರ್ಯಾನುಭವ ಹೊಂದಿರಬೇಕು. ಇದಲ್ಲದೆ, ಆಯ್ಕೆ ವಿಧಾನ ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ನಡೆಯಲಿದ್ದು ಆ ಬಳಿಕ ಸಂದರ್ಶನ ನಡೆಯಲಿದೆ. ಸಂಭಾವ್ಯ ಸಂಭಾವನೆ: 25-40 ಲಕ್ಷ ವಾರ್ಷಿಕ.

ಗುತ್ತಿಗೆ ಆಧಾರಿತ ಎಸ್‌ಬಿಐ ಎಸ್‌ಒ ಹುದ್ದೆಗಳು ಹುದ್ದೆ ಹೆಸರು: ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್‌ ) (Senior Executive) ಹುದ್ದೆಗಳ ಸಂಖ್ಯೆ : 1 ಹುದ್ದೆಯ ಸ್ಥಳ: AML / CFT, Jaipur ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 25 ವರ್ಷ ಹಾಗೂ ಗರಿಷ್ಠ 35 ವರ್ಷಗಳು. ಈ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸಿದರೆ, ಸ್ಟ್ಯಾಟಿಸ್ಟಿಕ್ಸ್‌/ ಗಣಿತ / ಅರ್ಥಶಾಸ್ತ್ರದಲ್ಲಿ ಪಿಜಿ ಅಥವಾ ಬಿಇ/ಬಿ.ಟೆಕ್/ ಪಿಜಿ ಡಿಪ್ಲೊಮ ಇನ್ ಸಿಎಸ್. ಜತೆಗೆ 5 ವರ್ಷ ಕಾರ್ಯಾನುಭವ ಹೊಂದಿರಬೇಕು. ಇದರ ಜೊತೆಗೆ ಅಯ್ಕೆ ಪ್ರಕ್ರಿಯೆ ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ಹಾಗೂ ಸಂದರ್ಶನವಿರಲಿದೆ. ಸಂಭಾವ್ಯ ಸಂಭಾವನೆ: 15-20 ಲಕ್ಷ ವಾರ್ಷಿಕ.

ಮೇಲೆ ತಿಳಿಸಿದ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸಲು 15-03-2023 ಕೊನೆ ದಿನಾಂಕವಾಗಿದ್ದು, ಈ ಮೊದಲೇ ಹುದ್ದೆಗೆ ಸಂಬಂಧಿಸಿದ ಯಾವುದೇ ಅನುಮಾನ ಗಳಿದ್ದರು ಬಗೆಹರಿಸಿಕೊಂಡು ಅರ್ಜಿ ಸಲ್ಲಿಸಬಹುದು

WhatsApp Image 2026-11-17 at 7.20.13 PM (1).jpeg
WhatsApp Image 2026-11-08 at 9.04.18 AM (2).jpeg
WhatsApp Image 2026-11-08 at 9.04.18 AM.jpeg
WhatsApp Image 2026-11-08 at 9.04.17 AM.jpeg
mudkuru indpe.jpg
WhatsApp Image 2026-11-08 at 9.04.18 AM (1).jpeg
WhatsApp Image 2026-11-09 at 7.15.05 PM.jpeg
WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.