logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲು ನನ್ನ ಜೊತೆಯಾಗಿ: ಮುನಿಯಾಲು ಉದಯ ಶೆಟ್ಟಿ

ಟ್ರೆಂಡಿಂಗ್
share whatsappshare facebookshare telegram
8 May 2023
post image

ಕಾರ್ಕಳ: ಕಾರ್ಕಳಕ್ಕೆ ಬೇಕಿರುವುದು ಆಡಂಭರ ತೋರಿಕೆಯಲ್ಲ.ಸಹಜ ಸುಂದರ ಅಭಿವೃದ್ಧಿ, ಈ ಊರಿನ‌ ಸೊಗಡನ್ನು ಹಾಳು ಮಾಡದಂತಹ,ಇಲ್ಲಿನ ಜನರ ಬದುಕಿಗೆ ಭರವಸೆ ಕೊಡುವ ಕೆಲಸಗಳು ಕಾರ್ಕಳಕ್ಕೆ ಬೇಕು.ಅಂತಹ ಅಭಿವೃದ್ಧಿಯ ಪರಿಕಲ್ಪನೆಗಳು ನನ್ನಲ್ಲಿವೆ.ಆ ಪರಿಕಲ್ಪನೆಯ ಸಾಕಾರಕ್ಕಾಗಿ ಈ ಸಲ‌ ಕಾರ್ಕಳದಲ್ಲಿ ನನ್ನನ್ನು ಬೆಂಬಲಿಸಿ‌,ನನ್ನ ಕನಸುಗಳಿಗೆ ಜೊತೆಯಾಗಿ ಎಂದು ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.

ಕಾರ್ಕಳವನ್ನು ಶಿಕ್ಷಣ ಕಾಶಿ ಮಾಡುವೆ:

ಕಾರ್ಕಳ ವಿಧಾನಾಸಭಾ ಕ್ಷೇತ್ರದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಸರಕಾರಿ ಮೆಡಿಕಲ್ ಕಾಲೇಜು, ಪ್ಯಾರಾಮೆಡಿಕಲ್, ನರ್ಸಿಂಗ್ ತರಬೇತಿ ಕಾಲೇಜು ನಿರ್ಮಾಣ, ಉದ್ಯೋಗಕ್ಕಾಗಿ ಐಟಿ ಪಾರ್ಕ್, ಉನ್ನತ ಶಿಕ್ಷಣ ಅಧ್ಯಯನ ಮಾಡುವ ಮಹಿಳೆಯರಿಗೆ ವಸತಿ ನಿಲಯ ಸೌಲಭ್ಯ, ನಗರ ವಲಸೆ ಕಾರ್ಮಿಕರಿಗಾಗಿ ವಸತಿ ಮತ್ತು ಶೌಚಾಲಯ ವ್ಯವಸ್ಥೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ವ್ಯವಸ್ಥೆ ಕಲ್ಪಿಸುವ ಯೋಜನೆ ಹೊಂದಿದ್ದೇನೆ.ಕಾರ್ಕಳವನ್ನು ಶಿಕ್ಷಣ ಕಾಶಿ ಮಾಡುವುದು ನನ್ನ ಮುಖ್ಯ ಧ್ಯೇಯ ಎನ್ನುತ್ತಾರೆ ಮುನಿಯಾಲು ಉದಯ್ ಶೆಟ್ಟಿ.

ಕಾರ್ಕಳ ಬೆಳಗಬೇಕು,ಜನ ಬೆಳೆಯಬೇಕು:

ಕಾರ್ಕಳದ ಜನತೆ ಬೆಳೆದರೆ,ಖಂಡಿತವಾಗಲೂ ಊರು ಬೆಳಗುತ್ತದೆ ಎನ್ನುವುದು ಉದಯ ಶೆಟ್ಟರ ಮನದಾಳದ ಮಾತು.ಅದಕ್ಕಾಗಿ ಕಾರ್ಕಳದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ

ಕಾರ್ಕಳದಲ್ಲಿ ತುಳು ಅಧ್ಯಯನ ಪೀಠ ಸ್ಥಾಪನೆ, ಜಾನಪದ ಹಾಗೂ ಎಲ್ಲಾ ವರ್ಗದ ಕುಶಲ ಕರ್ಮಿಗಳಿಗೆ ಮಾಶಾಸನಕ್ಕಾಗಿ ಒತ್ತಾಯ, ಮೂರ್ತೆದಾರರ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರ, ಪ್ರವಾಸೋದ್ಯಮಕ್ಕೆ ಒತ್ತು, ನೂತನ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಾಣ, ಕಸ್ತೂರಿರಂಗನ್ ವರದಿ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶೀಘ್ರ ವಿಲೇವಾರಿ, ಅಕ್ರಮ-ಸಕ್ರಮ, ಭೂ-ನ್ಯಾಯ ಮಂಡಳಿ, ಆಶ್ರಯ ಯೋಜನೆ, ಆರಾಧನೆ, ಧಾರ್ಮಿಕ ಪರಿಷತ್ ಹಾಗೂ ಇತರ ಎಲ್ಲಾ ಸಮಿತಿಗಳ ಸೂಕ್ತ ಜನಪರ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ನಡೆಸಬೇಕು ಎನ್ನುವುದು ಅವರ ಆಶಯ.

ಹೀಗೆ ಕಾರ್ಕಳದ ಅಭಿವೃದ್ದಿಗೆ ಪೂರಕವಾದ ನೂರಾರು ಯೋಜನೆಗಳು ನನ್ನ ಕಣ್ಣಮುಂದಿದ್ದು, ಮತದಾರರು ನನ್ನನ್ನು ಬೆಂಬಲಿಸಬೇಕು ಮುನಿಯಾಲು ಉದಯ ಶೆಟ್ಟಿ ಅವರು ಕಾರ್ಕಳದ ಮತದಾರರಲ್ಲಿ ವಿನಂತಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.