



ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಪ್ರಥಮ ಶಾಖೆಯನ್ನು ಕಲ್ಯಾಣಪುರ ಸಂತೆಕಟ್ಟೆಯ ಮೋಹಿನಿ ಟವರ್ ನ ಮೊದಲನೇ ಮಹಡಿಯಲ್ಲಿ ಜೂ. 29ರ ಬೆಳಗ್ಗೆ 10.30ಕ್ಕೆ ಶಾಸಕ ಯಶಪಾಲ್ ಎ. ಸುವರ್ಣ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲಿಸುವರು. ಶಂಕರಪುರದ ಸಾಯಿ ಸಾಂತ್ವಾನ ಮಂದಿರದ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರು ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸುವರು.
ಗಣಕ ಯಂತ್ರವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಭದ್ರತಾ ಕೋಶವನ್ನು ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಉದ್ಘಾಟಿಸಲಿದ್ದಾರೆ.
ನಿರಖು ಠೇವಣಿ ಸರ್ಟಿಫಿಕೆಟ್ ವಿತರಣೆಯನ್ನು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಮಾಂಡವಿ ಬಿಲ್ಡರ್ ನ ಜೆರ್ರಿ ವಿನ್ಸಂಟ್ ಡಯಾಸ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ ಬಿ.ಎನ್. ಶಂಕರ ಪೂಜಾರಿ, ಎಸ್.ಎನ್.ಜಿ.ವಿ. ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಉದ್ಯಮಿಗಳಾದ ಡಿ.ಆರ್. ರಾಜು, ಪ್ರಸಾದ್ ರಾಜ್ ಕಾಂಚನ್, ಕಟ್ಟಡದ ಮಾಲಕ ಶ್ಯಾಮ ಕೆ. ಪೂಜಾರಿ, ನ್ಯಾಯವಾದಿ ಪ್ರವೀಣ್ ಪೂಜಾರಿ, ಸಾಹಿತಿ ಬನ್ನಂಜೆ ಬಾಬು ಅಮೀನ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ರಾಜು ಪೂಜಾರಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಕೇಶ ಬಿ.ಎಲ್. ತಿಳಿಸಿದ್ದಾರೆ.
ವಿಶೇಷ ಯೋಜನೆ: ನೂತನ ಶಾಖೆಯ ಪ್ರಾರಂಭದ ಪ್ರಯುಕ್ತ ವಿಶೇಷ ಠೇವಣಿ ಯೋಜನೆಯಿದ್ದು, ಒಂದು ವರ್ಚದ ನಿಶ್ಚಿತ ಠೇವಣಿಗೆ ಶೇ 0.75 ಹೆಚ್ಚುವರಿ ಬಡ್ಡಿದರ ಅನ್ವಯವಾಗಲಿದೆ. ಈ ಕೊಡುಗೆ 2023ರ ಅಕ್ಟೋಬರ್ 31ರವರೆಗೆ ಅನ್ವಯಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.