



ಉಡುಪಿ: ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು, ಮಣಿಪಾಲ ಮತ್ತು ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು, ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು - ಹಣ್ಣು ಹಂಪಲು, ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸೋತ್ಸವ 2023 ಕಾರ್ಯಕ್ರಮವನ್ನು ಜು. 23 ರಂದು ಬೆಳಿಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ರತ್ನ ಸಂಜೀವ ಕಲಾಮಂಡಲದ ಆವರಣದಲ್ಲಿ ಆಯೋಜಿಸಲಾಗಿದೆ.
ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕರಾದ ಯಶ್ ಪಾಲ್ ಸುವರ್ಣ ಹಾಗು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ರವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಸ್ರೋತ್ಸವದಲ್ಲಿ ತೋಟಗಾರಿಕಾ ಇಲಾಖೆಯ ಎಲ್ಲಾ ಪ್ರಕಾರದ ಹೂವಿನ ಗಿಡಗಳು (ದಾಸವಾಳ, ಗುಲಾಬಿ, ನಂದಿ ಬಟ್ಟಲು, ಲಕ್ಷ್ಮೀತರು ಇತ್ಯಾದಿ), ಕಸಿ ಮಾವಿನ ಗಿಡಗಳು (ಆಲ್ಫಾನೋ, ಮಲ್ಲಿಕಾ, ಬಂಗನಪಲ್ಲಿ, ಮಲಗೋವಾ ಇತ್ಯಾದಿ), ಚಿಕ್ಕು, ಪೇರಳೆ, ಲಕ್ಷ್ಮಣ ಫಲ, ರಂಬುಟಾನ್, ಲಿಂಬೆ, ಕರಿಬೇವು ಸೊಪ್ಪು, ಅಡಿಕೆ, ತೆಂಗು, ಜಾಂಬು, ಕಾಳು ಮೆಣಸು, ಮಜ್ಜಿಗೆ ಹುಲ್ಲು, ಹಾಗೆಯೇ ಅರಣ್ಯ ಸಂಪತ್ತುಗಳಾದ ಸಾಗುವಾನಿ, ಶ್ರೀಗಂಧ, ರಕ್ತ ಚಂದನ, ಬಿಲ್ಪತ್ರೆ ಮುಂತಾದ ಗಿಡಗಳು ಉಚಿತವಾಗಿ ವಿತರಣೆಯಾಗಲಿದೆ.
23 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೂಡ 15,000 ಗಿಡಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಉಡುಪಿ ಇಂದ್ರಾಳಿಯ ಉಪವನ ನರ್ಸರಿ ಸಂಸ್ಥೆಯು ಈ ಕಾರ್ಯಕ್ರಮದ ಸಹಭಾಗಿತ್ವ ವಹಿಸಿ ಎಲ್ಲಾ ಸಸ್ಯಗಳ ಪೂರೈಕೆಯನ್ನು ಮಾಡುತ್ತಿದೆ.
ಪತ್ರಿಕಾ ಘೋಷ್ಠಿಯನ್ನು ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರು ನಡೆಸಿಕೊಟ್ಟರು. ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಇದರ ಅಧ್ಯಕ್ಷರಾದ ಗುರುರಾಜ್ ಭಂಡಾರಿ ಸರಳೇಬೆಟ್ಟು, ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು, ಕಾರ್ಯಕ್ರಮದ ಸಂಚಾಲಕರಾದ ಮಂಜುನಾಥ್ ಮಣಿಪಾಲ್ ಹಾಜರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.