



ಕಾರ್ಕಳ ದ ಎಂ.ಪಿ.ಎಂ. ಕಾಲೇಜಿನ ಜರ್ನಲಿಸಂ ವಿದ್ಯಾರ್ಥಿ ಪ್ರವೀಣ್ ಪೂಜಾರಿ ಬರೆದ ಲೇಖಕ
ನನ್ನ ಊರು ಕಾಬೆಟ್ಟು. ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಒಂದು ಪುಟ್ಟ ಪ್ರದೇಶ . ಇಲ್ಲಿ ಪುರಸಭೆ ಇದೆ. ಪುರಸಭಾ ವ್ಯಾಪ್ತಿಯಲ್ಲಿ ಕಾಬೆಟ್ಟು ಪ್ರದೇಶ ಕೂಡ ಒಂದಾಗಿದೆ. ಕನ್ನಡದಲ್ಲಿ ಕಾರ್ಕಳ ಎಂದು ಹೆಸರಾದರೆ ತುಳುವಿನಲ್ಲಿ ಕಾರ್ಲ ಎಂದೇ ಹೆಸರುವಾಸಿಯಾಗಿದೆ. ಸೂರ್ಯ ಉದಾಯಿಸುವುದರೊಂದಿಗೆ ಹಕ್ಕಿಗಳ ಚಿಲಿಪಿಲಿ ಸದ್ದು, ಸಂಜೆಯ ಹೊತ್ತು ಸೂರ್ಯ ಮುಳುಗುವುದನ್ನು ಕೂಡ ನೋಡುವುದೇ ಒಂದು ಚಂದ...
ಕಾರ್ಕಳ ತಾಲೂಕಿನಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳಿದ್ದು ಬೇರೆ ಬೇರೆ ಕಡೆಗಳಿಂದ ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಕಾರ್ಕಳದಲ್ಲಿನ 42ಅಡಿ ಎತ್ತರದ ಏಕಶಿಲ ಗೊಮ್ಮಟ ವಿಗ್ರಹ ಪ್ರಮುಖವಾದ ಪ್ರವಾಸಿ ಸ್ಥಳವಾಗಿದ್ದು ಅನೇಕ ಜನರು ಭೇಟಿ ನೀಡುತ್ತಾರೆ. ಅಲ್ಲದೇ ಇಲ್ಲಿನ ಅತ್ತೂರು ಸಹ ಒಂದು ಪ್ರವಾಸಿ ಸ್ಥಳವಾಗಿದೆ. ಕಾರ್ಕಳ ತಾಲೂಕಿನಲ್ಲಿರುವ ಪ್ರಸಿದ್ಧವಾದ ದೇವಾಲಯ ಎಂದರೆ ಶ್ರೀ ಮಾರಿಯಮ್ಮ ದೇವಸ್ಥಾನ. ಈ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಯ ಉತ್ಸವ ಮೂರ್ತಿ ಇದ್ದು ವರ್ಷ ಕ್ಕೊಮ್ಮೆ ಅದ್ದೂರಿಯಾದ ಉತ್ಸವ ಪೂಜೆ ಮೆರವಣಿಗೆ ನಡೆಯುತ್ತದೆ.
ಇಲ್ಲಿ ಪೂಜೆ, ಉತ್ಸವದ ಸಂದರ್ಭದಲ್ಲಿ ಅನೇಕ ಭಕ್ತರು ತಾಯಿಯ ದರ್ಶನ ಮಾಡಲು ಬರುತ್ತಾರೆ. ಈ ಪೂಜೆ ಸಂದರ್ಭದಲ್ಲಿ ಕಾರ್ಕಳದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿ ಆಗುತ್ತದೆ.ಅಲ್ಲದೇ ಈ ಕಾಬೆಟ್ಟು ಗ್ರಾಮದಲಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹ ಅನುಕೂಲ ಆಗುವಂತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಸಂಸ್ಥೆಗಳಿವೆ.ಒಟ್ಟಿನಲ್ಲಿ ಈ ಕಾಬೆಟ್ಟು ಗ್ರಾಮ ಎಂಬುದು ನಗರ ಪ್ರದೇಶವಾದರೂ ತುಂಬ ಸುಂದರವಾದ ವಾತಾವರಣವನ್ನು ಹೊಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.