



ಕಲಬುರಗಿ : ಕಳೆದ ನಾಲ್ಕೈದು ದಿನದಿಂದ ಕಲಬುರ್ಗಿ ಬಿಸಿಲಿನ ತಾಪಕ್ಕೆ ಬೆಂದು ಹೋಗಿದೆ. ಬೆಳಗಿನ ಜಾವ 6 ಗಂಟೆಯಿಂದಲೇ ಸೂರ್ಯನ ತೀಕ್ಷ್ಣತೆ ಹೆಚ್ಚಿ, ಜನ-ಜಾನುವಾರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅತಿ ಹೆಚ್ಚು ತಾಪಮಾನ 41 ಡಿ.ಸೆ ದಾಖಲಾದ ದಿನ ಇದಾಗಿದೆ. ಹಗಲು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣಕ್ಕೆ ರಾತ್ರಿ ಧಗೆಯೂ ಹೆಚ್ಚಾಗುತ್ತಿದ್ದು, ಧಗೆಯ ಕಾರಣಕ್ಕೆ ಜನ ಮನೆ ಮಾಳಿಗೆಯಲ್ಲಿ ಮಲಗುತ್ತಿರುವುದು ಸಾಮಾನ್ಯವಾಗಿರುವ ಕಾರಣದಿಂದ, ಸಮಯ ಸಾಧಿಸಿ ಕಳ್ಳರು ಮನೆ ಕಳವು ಮಾಡಿದಂತಹ ಪ್ರಕರಣಗಳು ಸಹ ನಗರದಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ ಜನ ಮಾಳಿಗೆಯ ಮೇಲೆ ಮಲಗಲೂ ಭಯ ಪಡುವಂತ ಸ್ಥಿತಿ ಎದುರಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.