logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಲಾಕುಲ್: ಜು.1ರಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭ

ಟ್ರೆಂಡಿಂಗ್
share whatsappshare facebookshare telegram
24 Apr 2024
post image

ಮಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎಂದು ಎಪ್ರಿಲ್ 19ರಂದು ಬೆಳಿಗ್ಗೆ ಮಂಗಳೂರು ಪತ್ರಿಕಾ ಭವನ ತಿಳಿಸಿದರು.

ಕೊಂಕಣಿ ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದೆ. `ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗಭೂಮಿ ಡಿಪ್ಲೋಮಾ ನಡೆಸುತ್ತಿದ್ದು, ಇದುವರೆಗೆ ನೂರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆದಿದ್ದಾರೆ. ಸುಮಾರು 50 ನಾಟಕ, ಕಿರುನಾಟಕಗಳ 250 ಕ್ಕೂ ಮಿಕ್ಕಿ ಪ್ರದರ್ಶನಗಳು ದೇಶ ವಿದೇಶಗಳಲ್ಲಿ ನಡೆದಿವೆ.

ಮಾಂಡ್ ಸೊಭಾಣ್ ಸಂಸ್ಥೆಯು `ಕಲಾಂಗಣ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಅನÀನ್ಯ ಬಯಲು ರಂಗ ಮಂದಿರದೊಡನೆ, ರಂಗ ತರಬೇತಿ ಮತ್ತು ಸಂಶೋಧನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ನೇತೃತ್ವದ ತಂಡ ಆಗಮಿಸಿ, ಪರಿಶೀಲಿಸಿದ ಬಳಿಕ ಕಲಾಕುಲ್ ವತಿಯಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ನಡೆಸಲು ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಆಡಳಿತ ಸಮಿತಿ ರಚಿಸಲಾಗಿದ್ದು, ಅದು ಸಭೆ ಸೇರಿ ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದರಂತೆ ಸೂಕ್ತ ತಯಾರಿ ನಡೆಸಿದ್ದು, ಎನ್ಎಸ್ಡಿ ಮತ್ತು ರಂಗಾಯಣದಿAದ ಪದವಿ ಪಡೆದ ಉಪನ್ಯಾಸಕರನ್ನು ನೇಮಿಸಲಾಗುವುದು.

ಜುಲೈ 01 ರಿಂದ ಆರಂಭವಾಗುವ 2024-25 ನೇ ಶೈಕ್ಷಣಿಕ ವರ್ಷದಿಂದ ಈ ರಂಗ ತರಬೇತಿ ಡಿಪ್ಲೋಮಾ ಕೋರ್ಸನ್ನು ಆರಂಭಿಸಲಾಗುವುದು. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದ ಯಾವುದೇ ಮಾತೃಭಾಷಿಕ ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆಯಲು ಅರ್ಹರಾಗಿದ್ದು, ಒಂದು ವರ್ಷದ ಎರಡು ಸೆಮಿಸ್ಟರ್ನ ಈ ಕೋರ್ಸ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ. ಅಂತಿಮ ಪರೀಕ್ಷೆಯನ್ನು ವಿಶ್ವವಿದ್ಯಾಲಯವೇ ನಡೆಸುತ್ತದೆ. ಇದು ಪೂರ್ಣಕಾಲೀಕ ಕೋರ್ಸ್ ಆಗಿದ್ದು, ಈ ಕೋರ್ಸ್ ಪಡೆದವರಿಗೆ ಶಾಲೆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಕ್ಷಕರಾಗಿ ದುಡಿಯಲು ಅವಕಾಶ ಲಭಿಸಲಿದೆ. ಅಗತ್ಯವುಳ್ಳವರಿಗೆ ಹಾಸ್ಟೆಲ್ ಸೌಲಭ್ಯವಿದೆ.

ಈ ಕೋರ್ಸ್ಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು www.manddsobhann.org ಡೌನ್ಲೋಡ್ ಮಾಡಿ, ಸರಿಯಾಗಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ, ಜೂನ್ 15ರೊಳಗೆ ಕಲಾಂಗಣ, ಮಕಾಳೆ, ಶಕ್ತಿನಗರ, ಮಂಗಳೂರು 575016 ಇಲ್ಲಿಗೆ ಅಂಚೆ ಮೂಲಕ ಅಥವಾ ಕೈಯಾರೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ (63640 22333-ಆಡಳಿತಾಧಿಕಾರಿ ಅಥವಾ 81052 26626-ಕಛೇರಿ) ಇಲ್ಲಿ ಸಂಪರ್ಕಿಸಬಹುದು. ಶ್ರೀ ಎರಿಕ್ ಒಝೇರಿಯೊ – ಗುರಿಕಾರ, ಮಾಂಡ್ ಸೊಭಾಣ್ ಶ್ರೀ ಲುವಿ ಜೆ. ಪಿಂಟೊ - ಅಧ್ಯಕ್ಷ, ಮಾಂಡ್ ಸೊಭಾಣ್ ವಿದುಷಿ ರಾಜಶ್ರೀ ಎಸ್ ಶೆಣೈ, ಸದಸ್ಯರು, ಆಡಳಿತ ಸಮಿತಿ ಡಾ ಎಸ್ಬಿಎಮ್ ಪ್ರಸನ್ನ, ಸದಸ್ಯರು, ಆಡಳಿತ ಸಮಿತಿ ಶ್ರೀ ಅರುಣ್ ರಾಜ್ ರೊಡ್ರಿಗಸ್ – ಆಡಳಿತಾಧಿಕಾರಿ, ಕಲಾಕುಲ್ ಮತ್ತು ಸದಸ್ಯ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದವರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.