



ಕಾರ್ಕಳ : ಕಲ್ಯಾ ಎಂಬಲ್ಲಿಎ.6 ರಂದು ಜಾಗ ಸಮತಟ್ಟು ಮಾಡಲೆಂದು ನಿಲ್ಲಿಸಿದ್ದ ಹಿಟಾಚಿಗೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ.
ಜಾರ್ಕಳದ ದಿನೇಶ್ ಶೆಟ್ಟಿ ಎಂಬವರು ಕಲ್ಯಾಗ್ರಾಮದ ಪಟ್ಟಾಸ್ಥಳದಲ್ಲಿ ಜಾಗವನ್ನು ಸಮತಟ್ಟು ಮಾಡಲೆಂದು ಏಪ್ರಿಲ್ 6 ರಂದು ಸಂಜೆ ಟಾಟಾ ಹಿಟಾಚಿ ಯಂತ್ರವನ್ನು ನಿಲ್ಲಿಸಿ ಹೋಗಿದ್ದರು .
ಏಪ್ರಿಲ್ 7 ರಂದು ಬೆಳಿಗ್ಗೆ 9 ಗಂಟೆಗೆ ಬಂದು ನೋಡಿದಾಗ ಕಿಡಿಗೇಡಿಗಳು ಹಿಟಾಚಿ ಯಂತ್ರಕ್ಕೆ ಬೆಂಕಿ ಹಚ್ಚಿದ್ದು ಯಂತ್ರವು ಸುಟ್ಟು ಕರಕಲಾಗಿದ್ದು ಸುಮಾರು 15 ಲಕ್ಷ ರೂ ನಷ್ಟ ಸಂಭವಿಸಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.