logo
WhatsApp Image 2026-04-02 at 14.46.04.jpeg
hindalco everlast.jpeg

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ: ಅ.23ರಂದು ಮಹಾನವಮಿ, ಅ.24ರಂದು ವಿಜಯೋತ್ಸವ ಆಚರಣೆ

ಟ್ರೆಂಡಿಂಗ್
share whatsappshare facebookshare telegram
23 Oct 2023
post image

ಸಿದ್ದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.23 ಸೋಮವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ (ರಥ ಬೀದಿ ಮತ್ತು ರಾಜಬೀದಿ), ಸಂಜೆ ಗಂಟೆ 5:30 ರಿಂದ 7:15 ರ ತನಕ ನೃತ್ಯಾಂಗಣ ನಾಟ್ಯಾಲಯ ಸಿದ್ದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಅ.24 ಮಂಗಳವಾರ ಉದಯ ಪೂರ್ವ 6.05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ ಮತ್ತು ಸಂಜೆ ವಿಜಯೋತ್ಸವ ನಡೆಯಲಿದೆ. ಸಂಜೆ 5:30 ಗಂಟೆಯಿಂದ 7:15 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜಲಗಲಿದೆ.

ಮಧ್ಯಾಹ್ನ ಮತ್ತು ರಾತ್ರಿ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇದ್ದು, ರಾತ್ರಿ ಉತ್ಸವದ ನಂತರ ಸಿದ್ದಾಪುರ ಹಾಗೂ ಹಳ್ಳಿಹೊಳೆ ಕಡೆ ಹೋಗುವವರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ ಚಂಡಿಕಾ ಯಾಗ ಮತ್ತು ಸಂಜೆ ಶ್ರೀ ರಂಗ ಪೂಜಾ ಮತ್ತು ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಹಾಗೂ ಅನ್ನ ಸಂತರ್ಪಣೆ ಸೇವೆ ಇರುವುದು ಎಂದು ಪ್ರಕಟಣೆ ತಿಳಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.