logo
WhatsApp Image 2026-04-02 at 14.46.04.jpeg
hindalco everlast.jpeg

ಕಮಲಶಿಲೆ ಶ್ರೀ ಬ್ರಾಹೀ ದುರ್ಗಾಪರಮೇಶ್ವರೀ ದೇವಸ್ಥಾನ: ಏ.16 ರಿಂದ ಏ.21ರ ವರೆಗೆ ಜಾತ್ರಾ ಮಹೋತ್ಸವ: ಏ.19 ರಂದು ಶ್ರೀಮನ್ನಹಾರಥೋತ್ಸವ

ಟ್ರೆಂಡಿಂಗ್
share whatsappshare facebookshare telegram
15 Apr 2025
post image

ಉಡುಪಿ: ಶ್ರೀ ಬ್ರಾಹೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16 ರಿಂದ ಏ.21ರ ವರೆಗೆ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.

ಕಾರ್ಯಕ್ರಮಗಳ ವಿವರ:

ತಾ.16-04-2025 ಚೈತ್ರ ಬಹುಳ 3 ಯು ಬುಧವಾರ ಸುಮುಹೂರ್ತದಲ್ಲಿ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ.

ತಾ.17-04-2025 ಚೈತ್ರ ಬಹುಳ 4 ಯು ಗುರುವಾರ ಸಿಂಹವಾಹನೋತ್ಸವ

ತಾ.18-04-2025 ಚೈತ್ರ ಬಹುಳ 5 ಯು ಶುಕ್ರವಾರ ಮಹಾ ರಂಗಪೂಜೆ ಮತ್ತು ಪುಷ್ಪಕ ವಾಹನೋತ್ಸವ

ತಾ.19-04-2025 ಚೈತ್ರ ಬಹುಳ 6 ಯು ಶನಿವಾರ ಸುಲಗ್ನದಲ್ಲಿ "ಶ್ರೀ ಮನ್ಮಹಾರಥೋತ್ಸವ".

ತಾ.20-04-2025 ಚೈತ್ರ ಬಹುಳ 7 ಯು ಭಾನುವಾರ ಚೂರ್ಣೋತ್ಸವ

ತಾ.21-04-2025 ಚೈತ್ರ ಬಹುಳ 8 ಯು ಸೋಮವಾರ ಪ್ರಾತಃ ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ನಡೆಯಲಿವೆ.

ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ

ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಆಡಳಿತ ಅನುವಂಶಿಕ ಮೊಕ್ತೇಸರರು

ಆಜ್ರಿ ಚಂದ್ರಶೇಖರ ಶೆಟ್ಟಿ ಅನುವಂಶಿಕ ಮೊಕ್ತಸರರು.

ವಿ.ಸೂ: 19-04-2025 ನೇ ಶನಿವಾರ ರಥೋತ್ಸವದ ರಾತ್ರಿ ಗಂಟೆ 10-00ಕ್ಕೆ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಸೇವೆ ಆಟ ಜರುಗಲಿರುವುದು.

ತಾ.20-04-2025 ರಂದು ತುಲಾಭಾರ ಸೇವೆ ಇರುವುದರಿಂದ ಸೇವೆ ಮಾಡಲಿಚ್ಚಿಸುವವರು 19-04-2025 ರ ಸಂಜೆ ಒಳಗೆ ತಿಳಿಸತಕ್ಕದ್ದು. ವರ್ಷದ ಎಲ್ಲಾ ದಿನಗಳಲ್ಲಿ ಬಂದಂತ ಭಕ್ತಾದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇದೆ.

ಪ್ರತೀ ದಿನ ಪ್ರಸಾದ ಸೀರೆಗಳ ಮಾರಾಟ ಇರಲಿದೆ‌ ಹಾಗೂ ರಥೋತ್ಸವ ಹಾಗೂ ಓಕಳಿ ದಿನಗಳಲ್ಲಿ ಸಿದ್ಧಾಪುರದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.