logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.20 ರಂದು ಶ್ರೀ ಚಂಡಿಕಾಯಾಗ ಹಾಗೂ ರಜತ ರಥೋತ್ಸವ, ಅ.21 ರಂದು ಕದಿರು ಮುಹೂರ್ತ, ವಿಜಯೋತ್ಸವ

ಟ್ರೆಂಡಿಂಗ್
share whatsappshare facebookshare telegram
20 Oct 2026
post image

ಉಡುಪಿ: ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಕ್ಷೇತ್ರದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ ಶರನ್ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅ. 21ರವರೆಗೆ ವಿಜೃಂಭಣೆಯಿಂದ ನಡೆಯಲಿವೆ.

ಮಹೋತ್ಸವದ ಅಂಗವಾಗಿ ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರತಿದಿನ ಸಂಜೆ 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 5.30ರಿಂದ 7.15ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದೆ.

ಅ.20ರಂದು ಶ್ರೀ ಚಂಡಿಕಾ ಯಾಗ, ರಜತ ರಥೋತ್ಸವ:

ಅಕ್ಟೋಬರ್ 20ರಂದು ಮಂಗಳವಾರ ನವಮಿಯ ಪ್ರಯುಕ್ತ ಮಧ್ಯಾಹ್ನ ಶ್ರೀ ಚಂಡಿಕಾ ಯಾಗ ನಡೆಯಲಿದೆ. ರಾತ್ರಿ ರಜತ ರಥೋತ್ಸವ ಹಾಗೂ ಪುಷ್ಪಕ ವಾಹನದಲ್ಲಿ ರಥಬೀದಿ ಮತ್ತು ರಾಜಬೀದಿಗಳಲ್ಲಿ ಪುರಮೆರವಣಿಗೆ ಜರುಗಲಿದೆ.

ಅ.21 ರಂದು ಕದಿರು ಮುಹೂರ್ತ, ವಿಜಯೋತ್ಸವ:

ಅಕ್ಟೋಬರ್ 21ರಂದು ಬುಧವಾರ ಬೆಳಗಿನ ಜಾವ 6.05ಕ್ಕೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು ಹಾಗೂ ಶಮೀ ಪೂಜೆ ನಡೆಯಲಿದೆ. ಸಂಜೆ ವಿಜಯೋತ್ಸವ ಜರುಗಲಿದೆ.

ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರತಿದಿನ ಮಧ್ಯಾಹ್ನ ಚಂಡಿಕಾ ಯಾಗ, ಸಂಜೆ ಶ್ರೀ ರಂಗಪೂಜೆ ಹಾಗೂ ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ರಾತ್ರಿ ಉತ್ಸವದ ಬಳಿಕ ಸಿದ್ಧಾಪುರ ಹಾಗೂ ಹಳ್ಳಿಹೊಳೆ ಕಡೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಶರನ್ನವರಾತ್ರಿ ಮಹೋತ್ಸವಕ್ಕೆ ಭಕ್ತಾದಿಗಳು ಇಷ್ಟಮಿತ್ರರು ಹಾಗೂ ಬಂಧು-ಬಾಂಧವರೊಂದಿಗೆ ಆಗಮಿಸಿ, ಶ್ರೀ ದೇವಿಯ ಪೂಜಾ ಉತ್ಸವಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಯಕ್ಷಗಾನ ಮೇಳದ ಆಟಗಳ ಬುಕ್ಕಿಂಗ್ ಕುರಿತು ಮಾಹಿತಿಶ್ರೀ ಕ್ಷೇತ್ರ ಕಮಲಶಿಲೆ ದಶಾವತಾರ ಯಕ್ಷಗಾನ ಮೇಳದ 2026-27ನೇ ಸಾಲಿನ ತಿರುಗಾಟವನ್ನು ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿದ್ದು, ಈ ಸಾಲಿನ ಎಲ್ಲಾ ಆಟಗಳು ಬುಕ್ಕಿಂಗ್ ಆಗಿವೆ. 2027-28ನೇ ಸಾಲಿನಲ್ಲಿ ಯಕ್ಷಗಾನ ಆಟ ಆಡಿಸಲು ಬಯಸುವವರು ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.