logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ದ್ರಾವಿಡ ಭಾಷೆಗಳಲ್ಲಿ ಕನ್ನಡವು ಅತೀ ಪ್ರಾಚೀನ ಹಾಗೂ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ : ತಹಶಿ ಲ್ದಾರ್ ಕೆ. ಪುರಂದರ

ಟ್ರೆಂಡಿಂಗ್
share whatsappshare facebookshare telegram
2 Nov 2021
post image

ಕಾರ್ಕಳ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತಮಿಳು ಭಾಷೆ ಹೊರತುಪಡಿಸಿದರೆ ದ್ರಾವಿಡ ಭಾಷೆಗಳಲ್ಲಿ ಅತೀ ಪ್ರಾಚೀನ ಹಾಗೂ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಮತ್ತು ಸ್ಥಾನ ಪಡೆದ ಭಾಷೆ ನಮ್ಮ ಕನ್ನಡ. ಪ್ರಾಚೀನ ಕಾವ್ಯಗಳು ಶಾಸನಗಳು, ಜನಪದ ಭಾಷೆಗಳಲ್ಲಿ ಕೊಂಡಾಡಲ್ಪಟ್ಟ ಕನ್ನಡ ಭಾಷೆ ಜನಮಾನಸದ ನಡುವೆ ಸಂಪದ್ಬರಿತವಾಗಿ ಬೆಳೆದು ನಿಂತಿದೆ ಎಂದು ಕಾರ್ಕಳ ತಹಸೀಲ್ದಾರ್ ಕೆ.ಪುರಂದರ್ ಹೇಳಿದ್ದಾರೆ. ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಷ್ಟçಧ್ವಜಾ ಅರಳಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ಬದುಕು. ಕನ್ನಡ ನಾಡು, ಸಂಸ್ಕೃತಿ ಕಾವೇರಿಯಿಂದ ಗೋದಾವರಿಯವರೆಗಿನ ನಾಡು ಕನ್ನಡ. ಕಾವ್ಯ ಪರಿಣತರನ್ನು ಹೊಂದಿದ ಸಿರಿವಂತಿಕೆಯ ಕನ್ನಡ ಭಾಷೆ ಪಂಡಿತ ಪಾಮರರಿಗೂ ಸುಲಭವಾದ ಭಾಷೆ. ಇದು ಕೇವಲ ನವೆಂಬರ್ ತಿಂಗಳಲ್ಲಿ ಆಗುವ ಅಭಿಮಾನದ ಮಾತುಗಳಲ್ಲ. ಕನ್ನಡ ಸಂಸ್ಕೃತಿ ಭಾಷೆಯ ಸೊಬಗು, ವೈಭವ, ಸೌಂದರ್ಯ ಅಪೂರ್ವವಾದುದು. ಅಮೋಘ ವರ್ಷ ಪಂಪ, ರನ್ನರಾದಿಯಾಗಿ ಹೊಸ ಪರಂಪರೆಯ ಕವಿಶ್ರೇಷ್ಠರವರೆಗಿನ ಕೆಚ್ಚೆದೆಯ ಭಾಷೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯಪರಂಪರೆಯ, ದಾಸ ಸಾಹಿತ್ಯ, ವಚನ ಸಾಹಿತ್ಯದ ಸಮೃದ್ದತೆಯ ಭಾಷೆ ಕನ್ನಡ. ವಚನ ಸಾಹಿತ್ಯ ಪ್ರಪಂಚದ ಸಾಹಿತ್ಯ ವಲಯದಲ್ಲೇ ಒಂದು ವಿಶಿಷ್ಟ ಪ್ರಕಾರ ಕನ್ನಡವಾಗಿದೆ. ಕನ್ನಡ ನಾಡು, ಸಂಸ್ಕೃತಿಯಲ್ಲಿ ನಾವು ಬೀಗುತ್ತಿದ್ದರೂ ಜತೆಜತೆಗೆ ಕನ್ನಡದ ವೈಭವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದೇವೆ. ಶುದ್ದ ಕನ್ನಡದ ಹುಡುಕಾಟದಲ್ಲಿದ್ದೇವೆ. ಶಿಕ್ಷಣ ಮಾಧ್ಯಮದ ಗೊಂದಲದಲ್ಲಿದ್ದೇವೆ ಎನ್ನುತ್ತಾ ಕನ್ನಡ ನಿತ್ಯೋತ್ಸವ ಎಂಬ ಆಶಯ ನನ್ನದು. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂಬ ಅಭಿಮಾನದೊಂದಿಗೆ ನಾವಿದ್ದೇವೆ. ಮನೆ, ಮನ ಮತ್ತು ಮಾತು ಕನ್ನಡವಾದಾಗ ಇವೆಲ್ಲವೂ ಸಾಧ್ಯ. ಯಾವುದೇ ಭಾಷೆಯಾಗಲಿ ಹಾಡುಗರ ಸಂಖ್ಯೆ ಕಡಿಮೆಯಾದಂತೆ ಅದು ಅಳುವಿನತ್ತಾ ಸಾಗುತ್ತದೆ. ಕನ್ನಡ ಭಾಷೆ ಮನೆಮಾತಾಗಬೇಕು. ಕನ್ನಡ ಹೃದಯ ಭಾಷೆಯಾಗಿ ಮಾರ್ಪಾಡಾಗಬೇಕು. ತನು ಕನ್ನಡ, ಮನಗನ್ನಡ, ಕನ್ನಡವು ಸರ್ವ ಕನ್ನಡಮಯವಾಗಿದ್ದರೆ ಮಾತ್ರ ನಾಡು ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ. ಕೇವಲ ಕನ್ನಡ ರಾಜ್ಯೋತ್ಸವದಂದು ಮಾತ್ರ ಕನ್ನಡದ ಬಗ್ಗೆ ಅಭಿಮಾನವಿರಿಸಿಕೊಳ್ಳದೆ ಪ್ರತಿದಿನವೂ ಕನ್ನಡ ಹಬ್ಬವನ್ನು ಆಚರಿಸುವಂತಾಗಲಿ. ಕನ್ನಡ ನಾಡಿನ ಭಾಷೆ ಅಭಿಮಾನದ ಜತೆಗೆ ಕನ್ನಡ ಅಭಿಮಾನವಿರಬೇಕು. ಹಾಗೂ ಬೆಳೆಸುವಂತಾಗಬೇಕು. ಮಾತು ಕೃತಿಯಲ್ಲಿ ಎಲ್ಲವನ್ನು ಕನ್ನಡವನ್ನು ಬಳಸಬೇಕು ಎಂದು ಕರೆಯಿತ್ತರು. ಕಾರ್ಕಳ ಅನಂತಶಯನ ವೃತ್ತದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರು ಆರತಿ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ, ರಾಜ್ಯೋತ್ಸವ ಜಾಥಕ್ಕೆ ಚಾಲನೆ ನೀಡಿದರು. ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್, ಕಾರ್ಕಳ ಪೊಲೀಸ್ ಉಪಾಧೀಕ್ಷಕ ಎಸ್.ವಿಜಯ ಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ಗ್ರಾಮಾಂತರ ಪಿಎಸ್‌ಐ ತೇಜಸ್ವಿ, ಹೆಬ್ರಿ ಪಿಎಸ್‌ಐ ಮಹೇಶ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಧಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಮಲ್ಯ ಪುರಸಭಾ ವಿಪಕ್ಷ ನಾಯಕ ಅಶ್ಪಾಕ್ ಅಹ್ಮದ್, ಪುರಸಭಾ ಸದಸ್ಯರಾದ ಶುಭದ ರಾವ್, ಯೋಗಿಶ್ ದೇವಾಡಿಗ, ಪ್ರದೀಪ್ ಮಾರಿಗುಡಿ, ನೀತಾ ಆಚಾರ್ಯ, ಮಮತಾ, ರೆಹಮತ್ ಎನ್ ಶೇಖ್, ಪ್ರತಿಮಾ, ಶೋಭಾ ದೇವಾಡಿಗ, ವಿನ್ನಿಬೋಲ್ಡ್ ಮೆಂಡೋನ್ಸ, ಸೋಮನಾಥ ನಾಯ್ಕ, ಹರೀಶ್ ದೇವಾಡಿಗ, ನಳಿನಿ ಆಚಾರ್ಯ, ಸಂತೋಷ್ ರಾವ್, ಪ್ರಸನ್ನ, ಶಶಿಕಲಾ ಶೆಟ್ಟಿ, ಅಶೋಕ್ ಸುವರ್ಣ, ಸಂಧ್ಯಾ ಮಲ್ಯ, ಉಪ ತಹಸೀಲ್ದಾರ್ ಮಂಜುನಾಥ್ ನಾಯಕ್, ತಾಲೂಕು ಕಂದಾಯ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಕರಣಿಕ ರಿಯಾಜ್, ಪುರಸಭಾ ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ತೋಮಸ್, ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಕಳ ನಗರದ ಅನಂತ ಶಯನದಿಂದ ರಾಜಮಾರ್ಗದಲ್ಲಿ ಕಾರ್ಕಳ ಬಸ್ ನಿಲ್ದಾಣ, ಮೂರು ಮಾರ್ಗ, ರಥಬೀದಿ ಮುಖಾಂತರ ಗಾಂಧಿ ಮೈದಾನಕ್ಕೆ ಸಾಗಿದ ಮೆರವಣಿಗೆ ಯಲ್ಲಿ ಕನ್ನಡ ಭುವನೇಶ್ವರಿ ರಥ, ಕಾರ್ಕಳ ಪುರಸಭೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವಿವಿಧ ಕಾಲೇಜುಗಳ ವೈವಿಧ್ಯಮಯ ಕನ್ನಡ ನಾಡು ನುಡಿಯ ಸಂದೇಶ ಸಾರುವ ಟ್ಯಾಬೋಗಳು ಮನ ಸೂರೆಗೊಂಡವು. ಕ್ರೆöÊಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ, ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಪ್ರೌಢಶಾಲೆ ಕಾರ್ಕಳ, ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆ, ಪೆರ್ವಾಜೆ ಪ್ರಾಥಮಿಕ ಶಾಲೆ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಸ.ಪ.ಪೂ.ಕಾಲೇಜು ಕಾರ್ಕಳ, ಎಸ್‌ಎನ್‌ವಿ ಪ್ರೌಢಶಾಲೆ ಹಿರಿಯಂಗಡಿ, ನೇತಾಜಿ ಸುಭಾಶ್ಚಂದ್ರ ಬೋಸ್ ಸ್ಕೌಟ್ ದಳ ಮತ್ತು ರಾಣಿ ಅಬ್ಬಕ್ಕ ಗೈಡ್ ದಳ, ಪೆರ್ವಾಜೆ ಪ್ರೌಢಶಾಲೆಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಜೂನಿಯರ್ ರೆಡ್‌ಕ್ರಾಸ್ ಘಟಕ, ಪೆರ್ವಾಜೆ ಪ್ರೌಢಶಾಲೆಯ ಹಳೆವಿದ್ಯಾರ್ಥಿಗಳ ಚೆಂಡೆ ಕಲಾ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.