



ಕನ್ನಡದ ನಟ ಸಂಪತ್ ಜಯರಾಮ್ ಶನಿವಾರ (ಏಪ್ರಿಲ್ 22) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿನಿಮಾ, ಸಿರಿಯಲ್ ಗಳಲ್ಲಿ ನಟಿಸಿದ್ದ ಸಂಪತ್ ಜಯರಾಮ್ ಅಗ್ನಿಸಾಕ್ಷಿ ಮೂಲಕ ಖ್ಯಾತಿ ಹೊಂದಿದ್ದರು. ಇತ್ತೀಚೆಗೆ ಸಂಪತ್ ಸಿನಿಮಾ, ಸೀರಿಯಲ್ ಗಳಲ್ಲಿ ಅವಕಾಶವಿಲ್ಲದೆ ಚಿಂತಿತರಾಗಿದ್ದರು ಎನ್ನಲಾಗಿದೆ. ಸದ್ಯ ತಮ್ಮ ಬದುಕಿಗೆ ವಿದಾಯ ಹೇಳಿದ್ದಾರೆ. ನಟನ ಸಾವಿನ ಸುದ್ದಿ ಎಲ್ಲರಿಗೂ ಆಘಾತ ಉಂಟುಮಾಡಿದೆ.
ಅತ್ಯಂತ ಚಿಕ್ಕವಯಸ್ಸಿಗೆ ಬದುಕು ಅಂತ್ಯಗೊಳಿಸಿದ ಸಂಪತ್ (35ವರ್ಷ) ಅವರಿಗೆ ಮದುವೆಯಾಗಿ ಒಂದು ವರ್ಷ ಆಗಿತ್ತು ಎಂದು ಹೇಳಲಾಗಿದೆ. ಸದ್ಯ ಪತ್ನಿ, ಕುಟುಂಬಸ್ಥರನ್ನು ಅಗಲಿದ್ದಾರೆ.
ನಟ ನೆಲಮಂಗಲದಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಎನ್ ಆರ್ ಪುರಕ್ಕೆ ಮೃತದೇಹ ರವಾನೆಯಾಗಲಿದೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.