



ಒಟ್ಟಾವ:ಕೆನಡಾದ ಸಂಸತ್ತಿನಲ್ಲಿ ಕನ್ನಡದ ಧ್ವನಿ ಮೊಳಗಿದೆ. ಕೆನಡಾ ಸಂಸತ್ತಿನ ಸದಸ್ಯನಾಗಿ ಆಯ್ಕೆಯಾದ ಅಪ್ಪಟ ಕನ್ನಡಿಗರೊಬ್ಬರು ಸಂಸತ್ತಿನಲ್ಲಿ ಕನ್ನಡ ಮಾತನಾಡುವ ಮೂಲಕ ಇಡೀ ವಿಶ್ವ ಬೆರಗು ಆಗುವಂತೆ ಮಾಡಿದ್ದಾರೆ.
ನೆಪಿಯನ್ ಕ್ಷೇತ್ರದ ಪ್ರತಿನಿಧಿ, ರಾಜ್ಯಸಭೆ ಸದಸ್ಯರಾದ ಕನ್ನಡಿಗ ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡಿದರು. ಸ್ಪೀಕರ್ ಅವರ ಪೂರ್ವಾನುಮತಿ ಪಡೆದು ಅವರು ಸಂಸತ್ತನ್ನುದ್ದೇಶಿ ಮಾತನಾಡಿದರು. ರಾಷ್ಟ ಕವಿ ಕುವೆಂಪು ಅವರ ಎಲ್ಲದರು ಇರು,
ಎಂಥಾದರು ಇರು, ಎಂದೆಂದಿಗೂ ನೀನು ಕನ್ನಡವಾಗಿರುವ ಕವನಗಳ ಸಾಲುಗಳನ್ನು ಉದ್ಘರಿಸುವ ಮೂಲಕ ಅವರು ಮಾತು ಮುಗಿಸಿದರು.
ನಮ್ಮ ದೇಶದ ಸಂಸತ್ತಿನಿಂದ ಮತ್ತು ರಾಜಕೀಯದಿಂದ ದೇಶಭಾಷೆಗಳನ್ನು ಕಣ್ಮರೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಅವರು ಕನ್ನಡದ ಕಂಪು ಬೀರಿದ್ದಾರೆ.
ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರು. ತಾಯಿನುಡಿಯ ಕುರಿತು ಅವರ ಕಾಳಜಿ, ಪ್ರೀತಿ ಉತ್ಸಾಹ ನಿಜಕ್ಕೂ ಅನುಕರಣೀಯ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.