logo
WhatsApp Image 2026-04-02 at 14.46.04.jpeg
hindalco everlast.jpeg

ಕಾಂತಾರ ಸಿನಿಮಾದಿಂದ ಕಂಬಳ ಜಗಜ್ಜಾಯಿರಾತು. : ಉದ್ಯಮಿ ಬಾಬು ರೆಡ್ಡಿ

ಟ್ರೆಂಡಿಂಗ್
share whatsappshare facebookshare telegram
6 Dec 2023
post image

ಹೆಬ್ರಿ: .ಕಾಂತಾರ ಸಿನಿಮಾದಿಂದ ಕಂಬಳ ಜಗಜ್ಜಾಯಿರಾಗುತ್ತಾಗಲು ಕಾರಣವಾಗಿದೆ. ಗ್ರಾಮೀಣ ಭಾಗದಲ್ಲಿ ಅತ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ಕುಚ್ಚೂರು ಕಂಬಳ ನೆರವೇರಿದೆ. ಬೆಂಗಳೂರು ಕಂಬಳ ನಮ್ಮನ್ನು ಗಮನಸೆಳೆದು ಇಲ್ಲಿ ತನಕ ಬರಲು ಅವಕಾಶ ಮಾಡಿದೆ. ಮುಂದಿನ ದಿನಗಳಲ್ಲಿ ಕುಚ್ಚೂರು ಸಾಂಪ್ರದಾಯಿಕ ಕಂಬಳಕ್ಕೆ ಇನ್ನಷ್ಟು ಸಹಕಾರ ನೀಡಲಾಗುವುದೆಂದು ಬೆಂಗಳೂರು ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಬಾಬು ರೆಡ್ಡಿ ಹೇಳಿದರು.

ಮಂಗಳವಾರ ಶ್ರೀ ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿಯ ಸಾಂಪ್ರದಾಯಕ ಕುಚ್ಚೂರು ಕಂಬಳದ ಸಮಾರೋಪ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಬೆಂಗಳೂರಿನ ಉದ್ಯಮಿಗಳಾದ ಬಾಬುರೆಡ್ಡಿ, ರಾಮಚಂದ್ರ ರೆಡ್ಡಿ, ರವಿ ರೆಡ್ಡಿ, ವಸಂತ ರೆಡ್ಡಿ, ಎಚ್ ಆರ್ ಮಧುಸೂದನ್ ರೆಡ್ಡಿ ಹಾಗೂ ಶ್ರೀಪತಿ ರಾವ್ ಅವರನ್ನು ಗೌರವಿಸಲಾಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ ಬಾರ್ಕೂರು ಮಾತನಾಡಿ ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಕುಚ್ಚೂರು ಕಂಬಳ ಅತ್ಯಂತ ವ್ಯವಸ್ಥಿತವಾಗಿ ಅನೇಕ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಸಾಂಪ್ರದಾಯಿಕವಾಗಿ ನಡೆಯುವುದರಿಂದ ಅನೇಕ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿರುತ್ತದೆ ಆದ್ದರಿಂದ ಸಾಧ್ಯವಾದಷ್ಟು ಸಂಜೆ 6 ರ ಒಳಗಾಗಿ ಕಂಬಳವನ್ನು ಮುಗಿಸಲು ಪ್ರಯತ್ನ ಮಾಡಬೇಕು ಎಂದರು.

ಫಲಿತಾಂಶ : ಹಗ್ಗ ಹಿರಿಯ ವಿಭಾಗ ಬೈಂದೂರು ತಗ್ಗರ್ಸೆ ನೀಲಕಂಠ ಉದಾರ್ ಪ್ರಥಮ, ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು ದ್ವಿತೀಯ ಸ್ಥಾನ. ಹಲಗೆಯಲ್ಲಿ ಪ್ರಜ್ವಲ್ ಪ್ರಣವ್ ಉಳ್ಳೂರು ಕಂದಾವರ ಪ್ರಥಮ, ನೀರಜ್ ಆತ್ಮಹಜ್ ದ್ವಿತೀಯ ಸ್ಥಾನ. ಅತಿ ಕಿರಿಯ ವಿಭಾಗದಲ್ಲಿ ಗಿರಿಜಾ ರೋಡ್ ಲೈನ್ಸ್ ಕೋಟ ಗಾಡಿ ಕೂಸುಪೂಜಾರಿ ಪ್ರಥಮ. ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ ದ್ವಿತೀಯ. ಹಗ್ಗ ಕಿರಿಯ ವಿಭಾಗ ನಾಗೇಶ್ ಹೆಬ್ಬಾರ್ ಭಟ್ಕಳ ಪ್ರಥಮ, ಅಡ್ಜಿಲ್ ಕುಂಭಾವಿ ಎನ್ ಧನ್ಯ ಶ್ರೀ ಹರೀಶ್ ನಾಯ್ಕ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳ ಕ್ರೀಡಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಭಟ್ ವಹಿಸಿದ್ದರು.

ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಸಿಎ ಎಚ್ ಆರ್ ಶೆಟ್ಟಿ, ಮೂಡುಬಿದರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಬಾಲಕೃಷ್ಣ ರಾವ್ ಕುಚ್ಚೂರು, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ ಕರುಣಾಕರ ಶೆಟ್ಟಿ, ಉದ್ಯಮಿ ಹರ್ಷ ಶೆಟ್ಟಿ, ಶ್ರೀ ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷ ಕಿರಣ್ ತೋಳಾರ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಜಾರ್ಮಕ್ಕಿ, ರಮೇಶ್ ಪೂಜಾರಿ, ಅಣ್ಣಯ್ಯ ಅಂಬಿಗ ಇದ್ದರು.

ಮಹೇಶ್ ಶೆಟ್ಟಿ ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.