logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾಪು: ದಿ.ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ಸ್ಮರಣಾರ್ಥ 'ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆ' ಮಾತೃ ಸೇವೆ, ಗೋ ಸೇವೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಪುತ್ತಿಗೆ ಶ್ರೀ ಅಭಿಮತ

ಟ್ರೆಂಡಿಂಗ್
share whatsappshare facebookshare telegram
22 Feb 2022
post image

ಕಾಪು: ಗುರ್ಮೆ ಫೌಂಡೇಶನ್ ವತಿಯಿಂದ ದಿ.ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ಸ್ಮರಣಾರ್ಥ ಕಾಪುವಿನ ಕಳತ್ತೂರಿನ ಗುರ್ಮೆಯಲ್ಲಿ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರ ಲೋಕಾರ್ಪಣೆಗೊಂಡಿತು. ಇದೇ ಸಂದರ್ಭದಲ್ಲಿ ಕೀರ್ತನ, ಸಾಂತ್ವನ, ಯಕ್ಷಗಾನ ಕಾರ್ಯಕ್ರಮ ವೈಭವದಿಂದ ನಡೆಯಿತು. ಕಾರ್ಯಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಮಾತೃ ಸೇವೆ, ಗೋ ಸೇವೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮಾತೃ ಸೇವೆ ಹಾಗೂ ಗೋ ಸೇವೆಯಿಂದ ಏಳಿಗೆ ಸಾಧ್ಯ ಎಂದರು. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಮಾತನಾಡಿ, ಗೋವುಗಳ ರಕ್ಷಣೆಗಾಗಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ಗೋಹತ್ಯಾ ನಿಷೇಧದ ಪ್ರಬಲ ಕಾನೂನು ಜಾರಿಗೆ ಬರುವ ಅಗತ್ಯವಿದೆ ಈ ಬಗ್ಗೆ ಪ್ರತಿಯೊಬ್ಬರೂ ಪ್ರತಿಜ್ಞೆ ಸ್ವೀಕರಿಸೋಣ ಎಂದು ಕರೆ ನೀಡಿದರು. ಇದೇ ವೇಳೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮನೆಯನ್ನೇ ಗೋ ಗೃಹವನ್ನಾಗಿಸಿಕೊಂಡು ಅವುಗಳಿಗೆಂದೇ 3 ಎಕರೆ ಪ್ರದೇಶದಲ್ಲಿ ಗೋವಿಹಾರ ಕೇಂದ್ರ ಕೇಂದ್ರ ನಿರ್ಮಿಸುವ ಮೂಲಕ ಗೋವುಗಳ ಸೇವೆಯಲ್ಲಿ ತಾಯಿಯ ಸೇವೆಯನ್ನು ಗೈಯುವ  ಅಪರೂಪದ ವ್ಯಕ್ತಿತ್ವ ಗುರ್ಮೆ ಅವರಲ್ಲಿ ಅನಾವರಣಗೊಂಡಿದೆ‌ ಎಂದರು. ಗೌರಿಗದ್ದೆ ಸ್ವರ್ಣ ಪೀಠಕಾಪುರದ ಅವಧೂತ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಿ ಸಮಾಜದ ಸೇವೆಯನ್ನು ಕಳಿಸುತ್ತಿರುವ ಗುರ್ಮೆ ಸಹೋದರರ ಸೇವೆಯಿಂದ ಸಮಾಜ ಸಂತುಷ್ಟಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಭರತ್ ಶೆಟ್ಟಿ, ಉದ್ಯಮಿ ಕೆ ಪ್ರಕಾಶ್ ಶೆಟ್ಟಿ ಬಂಜಾರ, ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 600 ಮಂದಿ ಅನಾರೋಗ್ಯ ಪೀಡಿತರಿಗೆ ಸಾಂತ್ವನ ಯೋಜನೆಯಡಿ  ತಲಾ 5,000 ರೂ. ಗಳಂತೆ ಧನ ಸಹಾಯ, 280 ಮಂದಿ ಆಶಾ ಕಾರ್ಯಕರ್ತೆಯರು, ದಾದಿಗಳು ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಪಡಿತರ ಕಿಟ್ ಮತ್ತು ಸೀರೆ ವಿತರಣೆ, 40 ಮಂದಿ ಪೌರ ಕಾರ್ಮಿಕರಿಗೆ ಪಡಿತರ ಕಿಟ್ ಮತ್ತು ಪ್ಯಾಂಟ್ ಶರ್ಟ್ ಪೀಸ್ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮುಂಬೈ ಸಾಹಿತಿ ಭರತ್ ಕುಮಾರ್ ಪೊಲಿಪು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೂರಿ ಶೆಟ್ಟಿ ಕಾಪು, ಬ್ರಹ್ಮಲಿಂಗೇಶ್ವರ ಕನ್‌ಸ್ಟ್ರಕ್ಷನ್ ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ನಿಧಿ ಕನ್‌ಸ್ಟ್ರಕ್ಷನ್ ನ ಸಂತೋಷ್ ಶೆಟ್ಟಿ ತೆಂಕರ ಗುತ್ತು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗುರ್ಮೆ ಫೌಂಡೇಶನ್ ಟ್ರಸ್ಟಿಗಳಾದ ಹರೀಶ್ ಪಿ ಶೆಟ್ಟಿ ಗುರ್ಮೆ,  ಸತೀಶ್ ಶೆಟ್ಟಿ ಗುರ್ಮೆ,ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ, ಪೆಯ್ಯಾರು ಶಿವರಾಮಶೆಟ್ಟಿ ದಾಮೋದರ ಶರ್ಮಾ, ಮತ್ತು ನಿತೇಶ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.