



ಕಾಪು : ವಾಹನಗಳ ಬ್ಯಾಟರಿ ಕಳವುಗೈಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಕಾಪು ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಾಪು ಮಾರಿಗುಡಿ ದೇವಸ್ಥಾನದ ಬಳಿಯ ನಿವಾಸಿ ಶರೀಫ್ (35), ಕಳತ್ತೂರು ಚಂದ್ರನಗರ ಜನತಾ ಕಾಲನಿಯ ನಿವಾಸಿ ಅಲ್ತಾಫ್ (26), ಕುಂದಾಪುರ ತೆಕ್ಕಟ್ಟೆಯ ಕಣ್ಣುಕೆರೆ ಗ್ರಾಮದ ಪ್ರಸ್ತುತ ಮೂಳೂರಿನ ಎಸ್‍ಎಸ್ ರೋಡ್ ನಿವಾಸಿ ಫರ್ಜೀನ್ ಅಹಮದ್ (21), ಮೂಳೂರಿನ ಫಿಶರೀಸ್ ರಸ್ತೆಯ ನಿವಾಸಿ ಅಫ್ಝಲ್ ರಹ್ಮಾನ್ (20), ಮೂಳೂರಿನ ಫಿಶರೀಸ್ ರಸ್ತೆಯ ಮುಹಮ್ಮದ್ ಇಜಾಝ್ (18) ಎಂದು ಗುರುತಿಸಲಾಗಿದೆ.
ಬಂಧಿತರಿಂದ 2.21 ಲಕ್ಷ ರೂ. ಮೌಲ್ಯದ 22 ಬ್ಯಾಟರಿ, ಮೂರು ಕಾರು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಶರೀಫ್ ಶಿರ್ವ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದು, ವಾಹನಗಳ ಬ್ಯಾಟರಿ ಕಳವು ಮಾಡುತಿದ್ದ ಬಗ್ಗೆ ಪಡುಬಿದ್ರಿ, ಶಿರ್ವ ಹಾಗೂ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‍ಪಿ ಎನ್. ವಿಷ್ಣುವರ್ಧನ್, ಎಎಸ್‍ಪಿ ಕುಮಾರಚಂದ್ರ ನಿರ್ದೆಶನದಂತೆ, ಕಾರ್ಕಳ ಡಿವೈಎಸ್‍ಪಿ ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ಇನ್ಸ್‍ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಪಿಎಸ್‍ಐ ತಿಮ್ಮೇಶ್, ರಾಘವೇಂದ್ರ, ತಂಡದ ಪ್ರವೀಣ್ ಕುಮಾರ್, ನಾರಾಯಣ, ರಾಜೇಶ್, ಹೇಮರಾಜ್, ಸಂದೇಶ, ಆನಂದ ರಘು, ಸಂತೋಷ್ ಮುಂತಾದವರು ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.