



ಉಡುಪಿ:
ಕಳತ್ತೂರು ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಚಂದ್ರನಗರ ಇದರ ಮಾಲಕರು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರು ಯುವ ನಾಯಕರು ಉದ್ಯಮಿಯಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ಎಲ್ಲಾ ಜಾತಿಯವರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು ಗ್ರಾಮ ಮಟ್ಟದ ಜನರಿಗೆ ತನ್ನಿಂದ ಆಗುವ ಸಹಾಯ ಮಾಡುತ್ತ ಕುಡಿಯುವ ನೀರು,ರಸ್ತೆ ನಿರ್ಮಾಣ,ಕೊರೋಣ ದಂತ ಮಹಾಮಾರಿ ಬಂದಾಗ ಸಂತ್ರಸ್ತರಿಗೆ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾಗಿ ಅದರ ಮುಖಾಂತರ ಸುಮಾರು 6000 ಕ್ಕೂ ಮಿಕ್ಕಿ ಮನೆಗೆ ಅಕ್ಕಿ ಪಡಿತರ ಕಿಟ್ ನೀಡಿದ್ದು ,ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆಯವರ ಸಹಕಾರದಿಂದ ಹಲವಾರು ಮೆಡಿಕಲ್ ಕ್ಯಾಂಪ್, ಬ್ಲಡ್ ಕ್ಯಾಂಪ್,ವಿದ್ಯಾರ್ಥಿ ವೇತನದಂತ ನೂರಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಸುಲಭ ರೀತಿಯಲ್ಲಿ ಸಿಗಲು ಹಲವಾರು ಮಾಹಿತಿ ಕಾರ್ಯಕ್ರಮ ಮಾಡಿರುತ್ತಾರೆ ಹೀಗೆ ಹತ್ತಾರು ಸಾಮಾಜಿಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಏಷ್ಯಾ ಫೇಷಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಜನಸೇವಾ ಸದ್ಭಾವನ್ ಪುರಸ್ಕಾರ್ ಅವಾರ್ಡ್ ಗೋವಾ,ಕೈರಲಿ ಪ್ರಕಾಶನ ಕೊಡಲ್ಪಟ್ಟ ಸಮಾಜ ರತ್ನ ಕೇರಳ ,ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಸಾಧಕ ರತ್ನ ಪ್ರಶಸ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ವತಿಯಿಂದ ಸಮಾಜ ರತ್ನ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಪಡೆದು ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಅಭಿನಂದನೆ ಪಡೆದಿರುತ್ತಾರೆ ಇದೀಗ ಡಿಸೆಂಬರ್ 10 ದುಬೈ ಅಲ್ ಖುಷಿಸ್ ಉಡ್ಲಮ್ ಪಾರ್ಕ್ ದುಬೈ ಶಾಲಾ ಸಭಾಂಗಣದಲ್ಲಿ ನಡೆಯುವ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ದೇಶ ಹಾಗೂ ವಿದೇಶದ ಗಣ್ಯತಿಗಣ್ಯರ ಸಮ್ಮುಖದಲ್ಲಿ 2023 ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಯೂತ್ ಐಕಾನ್ ಪಡೆಯಲಿದ್ದಾರೆಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ದುಬೈ ಘಟಕದ ಅಧ್ಯಕ್ಷರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ,ಕಾರ್ಯದರ್ಶಿ ಅಮರದೀಪ ಕಲ್ಲುರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.