



ಕಾರ್ಕಳ: ಯುವಶಕ್ತಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಕಾಳಿಕಾಂಬ, ಕರಿಯಕಲ್ಲು ಕಾರ್ಕಳ ಇಲ್ಲಿ ಹಳೇ ವಿದ್ಯಾರ್ಥಿ ಸಂಘ ಇವರ ಆಶ್ರಯದಲ್ಲಿ ಯುವಶಕ್ತಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮುದ್ದುಕೃಷ್ಣ & ರಾಧಾಕೃಷ್ಣ ಸ್ಪರ್ಧೆಯು ಸೆ.2ರಂದು ನಡೆಯಿತು.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಶ್ರೀ ಸಂತೋಷ್ ಲಾಡ್ ಕಾರ್ಕಳ ಇವರು ಆಗಮಿಸಿದ್ದರು. ಇವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಧೀರಾಜ್ ಇವರನ್ನು ಶಾಗ್ಲಿಸಿ ಅಭಿನಂದಿಸಿದರು ಇವರೊಂದಿಗೆ ವಸಂತ ಎಂ. ನಿವೃತ್ತ ಮುಖ್ಯೋಪಾಧ್ಯಾಯರು ಶಾರದಾ, ಅಧ್ಯಕ್ಷರು ಯುವಶಕ್ತಿ ಮಹಿಳಾ ಮಂಡಲ ಅಬ್ದುಲ್ ಕಾಲಿಕ್ ಶಾಲಾ ಸಂಚಾಲಕರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಸ್ಪರ್ಧಿಗಳಿಗೆ ಎಲ್ಲಾ ಅತಿಥಿ ಗಣ್ಯರು ಶುಭಾಶಯವನ್ನು ಕೋರಿದರು. ಅಪರಾಹ್ನ ನಡೆದಂತಹ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಬಿ. ಕೀರ್ತನ್ ಕುಮಾರ್ JGM, HCF, ಮಂಗಳೂರು, ಸುರೇಶ್ ಕೆ ಪಲ್ಲವಿ ಡೆಕೋರೇಟರ್ಸ್ ಕಾಳಿಕಾಂಬ ಕಾರ್ಕಳ, ದಿನೇಶ್ ಮ್ಯಾನೇಜರ್ ಶ್ರೀ ಕಾಳಿಕಾಂಬ ದೇವಸ್ಥಾನ ಕಾರ್ಕಳ, ಅಬ್ದುಲ್ ಕಾಲಿಕ್ ಶಾಲಾ ಸಂಚಾಲಕರು, ರಮಿತ್ ಕೋಟ್ಯಾನ್ ಅಧ್ಯಕ್ಷರು ಯೋಗ ಶಕ್ತಿ ಯೂತ್ ಕ್ಲಬ್, ಹರಣಿ ಅಧ್ಯಕ್ಷರು ಪೋಷಕ ಸಮಿತಿ, ಉದಯ್ ಹೆಗ್ಡೆ, ಸಂತೋಷ್ ರಾವ್, ಪ್ರಕಾಶ್ ರಾವ್ ನಳಿನಾಕ್ಷಿ ಹೆಗ್ಡೆ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮ್ಮೊಂದಿಗೆ ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಿದ ಶ್ರುತಿ ಕೆ ಶಿಂಧೆ, ಶರಣ್ಯ ಆಚಾರ್ಯ, ಶಾರದಾ ಹಾಗೆಯೇ ಪೋಷಕರು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುರಕ್ಷಾ ರಾವ್ ಇವರು ಸ್ವಾಗತಿಸಿ, ನಿವೇದ ಇವರು ಧನ್ಯವಾದ ಕಾರ್ಯಕ್ರಮ ನೇರೆವೇರಿಸಿದರು ಹಾಗೆಯೇ ಶ್ರುತಿ ಕೆ ಶಿಂಧೆ ಇವರು ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.