



ಜಿಲ್ಲಾ ಮಲೆಕುಡಿಯ ಸಂಘ (ರಿ.) ಉಡುಪಿ ಇದರ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯ ದ ಅಮೃತಾ ಮಹೋತ್ಸವದ ಧ್ವಜಾರೋಹಣವನ್ನು ಸಂಘದ ಕೇಂದ್ರ ಕಚೇರಿ ಪೇರಡ್ಕ (ಹಳೆ ಕಟ್ಟಡ)ದಲ್ಲಿ ಜರಗಿತು. ಜಿಲ್ಲಾಧ್ಯಕ್ಷರಾದ ಗಂಗಾಧರ ಗೌಡ ಈದು ಇವರು ಧ್ವಜಾರೋಹಣಗೈದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಇವರು ಆಶಯ ಭಾಷಣ ಮಾಡಿದರು. ನಿಕಟಪೂರ್ವ ಕೋಶಾಧಿಕಾರಿ ವಿಷ್ಣುಮೂರ್ತಿ ಕೆರ್ವಾಶೆ ಇವರು ಧ್ವಜವಂದನೆಯನ್ನು ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ಕೆರ್ವಾಶೆ ಇವರು ಕಾರ್ಯಕ್ರಮ ನಿರೂಪಿಸಿ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲರಿಗೂ ಶ್ರೀಮತಿ ಲಕ್ಷ್ಮೀ ಪೇರಡ್ಕ ಇವರು ಸಿಹಿ ತಿಂಡಿ ವಿತರಿಸಿದರು. ಕಾರ್ಯಕ್ರಮ ಸಮಾಪ್ತಿಯಾದ ನಂತರ ಆಗಸ್ಟ್ 21ರಂದು ಬೆಳ್ತಂಗಡಿ ತಾಲೂಕು ಕೊಯ್ಯುರಿನಲ್ಲಿ ನಡೆಯುವ ರಾಜ್ಯ ಮಲೆಕುಡಿಯ ಸಂಘದ ಮಹಾಸಭೆಗೆ ಉಡುಪಿ ಜಿಲ್ಲೆಯಿಂದ ಪ್ರಯಾಣದ ತಯಾರಿಯ ಬಗ್ಗೆ ಸಮಾಲೋಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಕಬ್ಬಿನಾಲೆ, ಕೋಶಾಧಿಕಾರಿ ಶ್ರೀಮತಿ ಸುಂದರಿ ಪೇರಡ್ಕ, ಸಂಘಟನಾ ಕಾರ್ಯದರ್ಶಿ ಸುಂದರ ರೆಂಜಾಳ, ವಕ್ತಾರರಾದ ದಿನೇಶ್ ಗೌಡ ನೂರಾಳ್ಬೆಟ್ಟು, ಸಹ ವಕ್ತಾರ ಮನೋಜ್ ಪೇರಡ್ಕ, ರಾಜ್ಯ ಮಲೆಕುಡಿಯ ಸಂಘದ ಕಾರ್ಯಕಾರಿಣಿ ಸದಸ್ಯರಾದ ಡೀಕಯ್ಯ ಗೌಡ ನೂರಾಳ್ಬೆಟ್ಟು, ಹಾಗೂ ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.