



ಕಾರ್ಕಳ : ಮಾರುತಿ ಕಾರಿಗೆ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಪ್ರಯಾಣಿಕ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ಕ್ರಾಸ್ ಎಂಬಲ್ಲಿ ನಡೆದಿದೆ .ಸುದರ್ಶನ್ ಭಂಢಾರಿ ಗಾಯಗೊಂಡವರು . ರೋಷನ್, ಸಂತೋಷ್, ಸುದರ್ಶನ್ ಭಂಡಾರಿ, ರಂಜಿತ್ ಮಾರುತಿ ಕಾರಿನಲ್ಲಿ ಬೈಲೂರಿನಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ವೇಳೆ ಹಾರ್ಜಡು ್ಡಕ್ರಾಸ್ ಬಳಿ ಅಬ್ದುಲ್ ಫಾರೂಕ್ ಚಲಾಯಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದೆ ಕಾರಿನ ಹಿಂಬದಿ ಸೀಟ್‌ನಲ್ಲಿ ಕೂತಿದ್ದ ಸುದರ್ಶನ್ ಭಂಡಾರಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ಯಾವುದೇ ಸೂಚನೆ ನೀಡದೇ ಹಾರ್ಜಡ್ಡು ಕ್ರಾಸ್ ನಲ್ಲಿ ತಿರುಗಿಸಿದ ಕಾರಣ ಅಪಘಾತ ಉಂಟಾಗಿದೆ . ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.