



ಕಾರ್ಕಳ : ಮನೆಯಲ್ಲಿಯೇ ಹೆರಿಗೆ ಮಾಡಿಸಿ, ಬಾಣಂತಿ ಯನ್ನು ಆಂಬುಲೆನ್ಸ್ ಮೂಲಕ ಹಾಸ್ಪಿಟಲ್ ಗೆ ದಾಖಲಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ನ.27 ರಂದು ಕಾರ್ಕಳ 108. ಆಂಬುಲೆನ್ಸ್ ಸಿಬ್ಬಂದಿ emt ರಾಧಾಮಣಿ. ಜಿ.ಕೆ. pilot ಪುಂಡಲಿಕ ಇವರು ನಿಟ್ಟೆ ಗ್ರಾಮದ ಶ್ರೀ ಮತಿ ಗೀತಾ ಅವರಿಗೆ ಹೆರಿಗೆ ನೋವಿನಿಂದ ನರಳುತಿದ್ದರು.. ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿಗಳು. ಮನೆಯಲ್ಲಿಯೇ ಗಂಡು ಮಗುವನ್ನು ಹೆರಿಗೆ ಮಾಡಿಸಿದ್ದಾರೆ. ಮನೆಗೂ ಹೆದ್ದರಿಗೂ ಸುಮಾರು 1 ಕೀ ಮಿ. ದೂರ ಇದ್ದು ಆಂಬ್ಯುಲೆನ್ಸ್ ಮನೆಯ ಬಳಿ ಹೋಗಲು ಸಾಧ್ಯವಿಲ್ಲದ ಕಾರಣ ಗೀತಾ ಅವರಿಗೆ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ತಾಯಿ ಮಗು 2 ಸಹ ಆರೋಗ್ಯವಾಗಿದ್ದು ಇವರನ್ನು ಕಾರ್ಕಳ 108 ಆಂಬ್ಯುಲೆನ್ಸ್ ನಲ್ಲಿ ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.. ತಾಯಿ ಮಗು 2 ಸಹ ಆರೋಗ್ಯವಾಗಿದ್ದಾರೆ ಎಂದು ಹಾಸ್ಪಿಟಲ್ ವೈದ್ಯರು ತಿಳಿಸಿದ್ದಾರೆ. 108 ಸಿಬ್ಬಂದಿಗಳ ಸ್ಪಂದಿಸಿದ ಕಾರ್ಯಕ್ಕೆ ಸಾಮಾಜಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.