



ಕಾರ್ಕಳ: ಅಜೆಕಾರು ಕೈಕಂಬ ಎಂಬಲ್ಲಿ ಬಾವಿಗೆ ಬಿದ್ದ ಯುವಕನೊಬ್ಬನನ್ನು ಕಾರ್ಕಳ ಅಗ್ನಿ ಶಾಮಕ ದಳವು ರಕ್ಷಿಸಿದ ಘಟನೆ ಫೆ.26ರ ಬೆಳಿಗ್ಗೆ ನಡೆದಿದೆ.
ಸುಕುಮಾರ(40) ಎಂಬವರು ಬಾವಿಗೆ ಬಿದ್ದು ಜೀವಾಪಾಯದಿಂದ ಪಾರಾದವರು. ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ. ಆಕಸ್ಮಿಕವಾಗಿ ಯುವಕ ಬಿದ್ದಿರ ಬೇಕೆಂದು ಶಂಕಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಿ ಎಂ ಸಂಜೀವ್, ದಪೆದರ್ ಅಚ್ಚುತ ಸಿಬ್ಬಂದಿಗಳಾದ ಚಂದ್ರಶೇಖರ್, ,ನಿತ್ಯಾನಂದ, ಸುಜಯ್, ಉಮೇಶ್, ವಿನಾಯಕ,ಸಂಜಯ್ ಪಾಲ್ಗೊಂಡಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.