



ಕಾರ್ಕಳ: ಅಗಸ್ಟ್ 1 ರಿಂದ ಅಗುಂಬೆ ಘಾಟಿ ಯಲ್ಲಿ ಬಸ್ ಹಾಗು ಲಘು ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ . ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗುಂಬೆ ಘಾಟಿಯ11 ನೆ ತಿರುವಿನಲ್ಲಿ ಕುಸಿತ ಉಂಟಾಗಿತ್ತು. ಜೊತೆಗೆ ರಸ್ತೆ ಯ ತಡೆಗೋಡೆಯು ಹಾನಿಯಾಗಿತ್ತು .ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಗಳು ಜುಲೈ10 ರಂದು ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಜುಲೈ13 ರಂದು ಲಘು ವಾಹನಗಳ ಪ್ರಯಾಣಕ್ಕೆ ಅನುವು ಮಾಡಲಾಗಿತ್ತು. ಅಗಸ್ಟ್ 1 ರಿಂದ ಸಾರ್ವಜನಿಕ ರ ಕೋರಿಕೆ ಯಂತೆ ಬಸ್ ಹಾಗೂ ಲಘು ವಾಹನಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದೆ ಅದರೆ ಲಾರಿ ಟಿಪ್ಪರ್ ಸೇರಿದಂತೆ ಘನ ವಾಹನಗಳಿಗೆ ಅಗಸ್ಟ್30 ರ ವರೆಗೆ ನಿಷೇಧ ಹೇರಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.