



ಕಾರ್ಕಳ: ಧಾರ್ಮಿಕ ಕಾರ್ಯಕ್ರಮದಲ್ಲಿ ಗಣ್ಯರಿಗೆ ಊಟ ಬಡಿಸುವ ವಿಚಾರದಲ್ಲಿ ದಲಿತರನ್ನು ನಿಂದನೆ ಮಾಡಲಾಗಿದೆ ಎನ್ನುವ ಆರೋಪದಡಿ ರಮಿತಾ ಶೈಲೇಂದ್ರ ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಲಿತ ದೌರ್ಜನ್ಯ ದೂರು ದಾಖಲಾಗಿದೆ.
ಕಾರ್ಕಳ ಎಸ್‌ವಿಟಿ ಸರ್ಕಲ್ ಬಳಿಯ ನಿವಾಸಿ ರಮಿತಾ ಶೈಲೇಂದ್ರ ಎಂಬವರು ಕಾರ್ಕಳದ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಊಟೋಪಚಾರ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುವ ಸಂದರ್ಭದಲ್ಲಿ ಸಮಿತಿಯಲ್ಲಿ ದಲಿತ ಸಮುದಾಯದವರು ಗಣ್ಯರಿಗೆ ಬಡಿಸಿದರೆ ಮೈಲಿಗೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ ದಲಿತರನ್ನು ನಿಂದಿಸಿದ್ದಾರೆ ಎಂದು ದಲಿತ ಸಮುದಾಯದ ಮುಖಂಡೆ ಹಾಗೂ ಪುರಸಭಾ ಸದಸ್ಯೆ ಪ್ರತಿಮಾ ರಾಣೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ರಮಿತಾ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.