



ಕಾರ್ಕಳ: ಒರಿಸ್ಸಾದಲ್ಲಿ ಕೆಲಸಕಿದ್ದ ಕಾರ್ಕಳ ಮೂಲದ ಯುವಕನೋರ್ವ ವಿಷ ಆಹಾರ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆತನ ಒರಿಸ್ಸಾ ಸ್ನೇಹಿತರು, ಕೂಡಲೇ ಅಲ್ಲಿನ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಕೊನೆಗೆ ಅಲ್ಲಿಂದ ಊರಿಗೆ ಕರೆತರುವ ಪ್ರಯತ್ನ ಮಧ್ಯೆ ಆತ ತೀವೃ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಮೂರು ದಿನಗಳಿಂದ ಆತನ ಶವ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿದೆ. ಮಗನ ಶವ ಸಿಗಬೇಕಿದ್ದರೆ ಒರಿಸ್ಸಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಬಿಟ್ಟು ಕೊಡಬೇಕಾಗಿದೆ. ಆದರೇ ಅದನ್ನು ಒರಿಸ್ಸಾ ಪೊಲೀಸರು ಮಾಡುತಿಲ್ಲ. ಇದರಿಂದ ಮಗನ ಶವಕ್ಕಾಗಿ ತಾಯಿ ನೀರು ಆಹಾರ ತ್ಯಜಿಸಿ ರೋಧಿಸುತಿದ್ದು, ನ್ಯಾಯ ನೀಡುವಂತೆ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಕಳ ತಾಲೂಕಿನ ಕಸಾಬಾ ಗ್ರಾಮದ ನಿವಾಸಿ ದಮೇಂದ್ರ ಎಂಬುವವರ ಅಣ್ಣನ ಮಗ ಕಾರ್ತಿಕ್ ( 25) ಸುಮಾರು 5 ವರ್ಷಗಳಿಂದ ಮಂಗಳೂರು ಪ್ಲಾನ್‌ಟೆಕ್ ಕಂಪೆನಿಯಲ್ಲಿ ಸೇಪ್ಟಿ ಸೂಪರ್‌ವೈಸರ್ ಆಗಿ ಕೆಲಸಕ್ಕೆ ಆಯ್ಕೆಯಾಗಿದ್ದ. ಅನಂತರ ಒರಿಸ್ಸಾಕ್ಕೆ ತೆರಳಿ ಅದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜ. 14ರಂದು ಮಂಗಳೂರು ಕಂಪೆನಿಯ ಮೆನೇಜರ್ ಕುಶಲ್‌ರವರು ದರ್ಮೆಂದ್ರರವರಿಗೆ ಕರೆ ಮಾಡಿ ಒರಿಸ್ಸಾದಲ್ಲಿರುವ ಕಾರ್ತಿಕ್ ವೈಯಕ್ತಿಕ ವಿಚಾರಕ್ಕೆ ನೊಂದು ವಿಷ ಆಹಾರ ಸೇವಿಸಿರುವುದಾಗಿ, ಆತನ ಒರಿಸ್ಸಾ ಸ್ನೇಹಿತರು ಕಟಕ್‌ನ ರಿಲಾಕ್‌ಸ್‌ನ ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿಸಿದ್ದಾರೆ. ಧರ್ಮೇಂದ್ರರವರು ಆತನ ಪೋಷಕರಿಗೆ ವಿಚಾರ ತಿಳಿಸಿ, ಸಂಬಂಧಿಕರಾದ ವೇಲು ಮತ್ತು ಕೃಷ್ಣರವರೊಂದಿಗೆ ಜ. 17ರಂದು ಕಟಕ್ ತಲುಪಿದ್ದರು. ಕಟಕ್‌ನ ರಿಲಾಕ್‌ಸನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ಆ ವೇಳೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆತನ ಚಿಕಿತ್ಸೆಗೆ ಹೆಚ್ಚಿನ ಹಣದ ಆವಶ್ಯಕತೆ ಬಗ್ಗೆ ಆಸ್ಪತ್ರೆಯವರು ತಿಳಿಸಿದರಲ್ಲದೆ 94 ಸಾವಿರ ರೂ. ಆಸ್ಪತ್ರೆ ಬಿಲ್ ಕೂಡ ಆಗಿತ್ತು. ಆಸ್ಪತ್ರೆಯಿಂದ ಅಲ್ಲಿನ ಮಂಗಲ್ ಬಾಗ್ ಪೊಲೀಸ್ ಠಾಣೆಗೆ ಮಾಹಿತಿ ಬಂದು, ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅಲ್ಲಿ ಹೋದ ಇವರಿಗೆ ಒರಿಸ್ಸಾ ಭಾಷೆ ಮಾತನಾಡಲು ಬಾರದೆ ಇದ್ದ ಕಾರಣ, ಪೊಲೀಸರು ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಕಾರ್ತಿಕ್‌ನನ್ನು ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಅಂಬುಲೆನ್ಸ್ ನಲ್ಲಿ ಉಡುಪಿ ಕಡೆಗೆ ಕರೆ ತರುತಿದ್ದ ವೇಳೆ ಜ. 19 ರಂದು ಮದ್ಯಾಹ್ನ ದಾರಿ ಮದ್ಯೆ ಜ್ಯೂಸ್ ಕುಡಿಸಿದ್ದು, ಕಾರ್ಕಳ ತಲುಪುವ ವೇಳೆ ಆತ ತೀರಾ ಅಸ್ವಸ್ಥನಾಗಿದ್ದ ಎನ್ನಲಾಗಿದೆ.
ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾಾರೆ. ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಕಾರ್ಕಳ ನಗರ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯವರು ಕಾರ್ತಿಕ್‌ನು ಒರಿಸ್ಸಾ ರಾಜ್ಯದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾರಣದಿಂದ ಪ್ರಕರಣದ ಬಗ್ಗೆ ಒರಿಸ್ಸಾದ ಪಾರಾದೀಪ್ ಲಾಕ್ ಪೊಲೀಸ್ ಠಾಣೆಗೆ ಸೂಚನಾ ಪತ್ರ ಕಳುಹಿಸಿ ಮಾಹಿತಿ ನೀಡಿದ್ದಾರೆ. ಒರಿಸ್ಸಾದ ಪ್ಲಾನ್ ಟೆಕ್ ಕಂಪನಿಯ ಪಾರಾದೀಪ್‌ನ ಮ್ಯಾನೇಜರ್ ಅಕ್ಷಯ್ ಶೆಟ್ಟಿರವರು ಠಾಣೆಗೆ ಹೋದಾಗಲೂ ಅಲ್ಲಿಯ ಪೊಲೀಸರು ಸ್ಪಂದಿಸಿ ದೂರು ಸ್ವೀಕರಿಸಿರುವುದಿಲ್ಲ ಎನ್ನಲಾಗಿದೆ. ಕಾರ್ತಿಕ್‌ನ ಮೃತದೇಹ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತಾರೆ. ಒರಿಸ್ಸಾ ಪಾರಾದೀಪ್ ಲಾಕ್ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬಿಟ್ಟುಕೊಡದೆ ಇರುವುದರಿಂದ, ಶವ ಕಳೆದ ಮೂರು ದಿನಗಳಿಂದ ಶವಗಾರದಲ್ಲಿ ಬಾಕಿಉಳಿಯುವಂತಾಗಿದೆ.
ಮಗ ಮೃತ ಪಟ್ಟು ಮೂರು ದಿನಗಳು ಕಳೆದಿದೆ. ತಾಯಿ ಆಹಾರ ಸೇವಿಸದೆ ಅಸ್ವಸ್ಥರಾಗಿದ್ದು, ಮಗನ ಶವ ಪಡೆಯಲು ಪರದಾಡುತ್ತಿದ್ದಾರೆ. ನೊಂದ ಮಹಿಳೆ ನಗರ ಠಾಣೆಗೆ ಬಂದು ದೂರು ನೀಡಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.